×
Ad

ಚುನಾವಣಾ ಪ್ರಚಾರದ ಮಧ್ಯೆಯೇ ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿಯ ಹತ್ಯೆ

Update: 2023-08-10 08:12 IST

Photo: Twitter

ಕ್ಯೂಟೊ (ಈಕ್ವೆಡಾರ್): ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ಫೆರ್ನಾಂಡೊ ವಿಲ್ಲಾವಿನ್ಸಿಯೊ ಅವರನ್ನು ಬುಧವಾರ ಚುನಾವಣಾ ಪ್ರಚಾರಸಭೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಅಧ್ಯಕ್ಷ ಗ್ಯುಲೆರ್ಮೊ ಲಸ್ಸೊ ಪ್ರಕಟಿಸಿದ್ದಾರೆ. ಈ ಹಂತಕರಿಗೆ ಶಿಕ್ಷೆ ವಿಧಿಸದೇ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಕ್ಯೂಟೊದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. "ಅವರ ಸ್ಮರಣೆ ಹಾಗೂ ಹೋರಾಟಕ್ಕಾಗಿ, ಈ ಅಪರಾಧಕ್ಕೆ ಸೂಕ್ತ ಶಿಕ್ಷೆಯಾಗದೇ ಬಿಡುವುದಿಲ್ಲ ಎನ್ನುವುದನ್ನು ಖಾತರಿಪಡಿಸುತ್ತೇನೆ" ಎಂದು ಲಾಸ್ಸೊ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ. "ಸಂಘಟಿತ ಅಪರಾಧ ಬಹಳಷ್ಟು ಮುಂದುವರಿದಿದೆ. ಆದರೆ ಕಾನೂನಿನ ಎಲ್ಲ ಬಲ ಅವರ ಮೇಲೆ ಬೀಳಲಿದೆ" ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಉನ್ನತ ಭದ್ರತಾ ಅಧಿಕಾರಿಗಳ ತುರ್ತು ಸಭೆ ಕರೆದಿರುವುದಾಗಿ ಅವರು ಪ್ರಕಟಿಸಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಜನ ಇದರಿಂದ ರಕ್ಷಣೆ ಪಡೆಯಲು ಅಡಗಿಕೊಳ್ಳುತ್ತಿರುವ ಮತ್ತು ಚೀರಾಡುತ್ತಿರುವ ದೃಶ್ಯಗಳು ಚುನಾವಣಾ ಪ್ರಚಾರ ಸಭೆ ಕುರಿತ ವಿಡಿಯೊಗಳಲ್ಲಿ ಕಾಣಿಸುತ್ತಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News