×
Ad

ಇರಾನ್ ನ ಪೂರ್ವ ಟೆಹ್ರಾನ್ ನಲ್ಲಿ ಭಾರೀ ದಾಳಿ; ಕನಿಷ್ಠ 40 ಮೃತ್ಯು

Update: 2026-03-10 02:10 IST

PC | aljazeera

ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ ನ ಪೂರ್ವ ಭಾಗದಲ್ಲಿರುವ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.

ದಾಳಿಯ ಪರಿಣಾಮವಾಗಿ ರಾಜಧಾನಿಯಲ್ಲಿ ಭಾರೀ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಕೆಲವೇ ನಿಮಿಷಗಳ ಅಂತರದಲ್ಲಿ ದೊಡ್ಡ ಸ್ಫೋಟ ಸಂಭವಿಸಿರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ. ಆದರೆ ಸ್ಫೋಟದ ನಿಖರ ಗುರಿ ಅಥವಾ ಅದರ ಪರಿಣಾಮದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ನಗರದಲ್ಲಿ ದಿನವಿಡೀ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪ್ರತಿ ಒಂದು ಅಥವಾ ಎರಡು ಗಂಟೆಗಳಿಗೊಮ್ಮೆ ಸ್ಫೋಟಗಳ ಶಬ್ದಗಳು ಕೇಳಿಬರುತ್ತಿವೆ ಎಂಬ ವರದಿಗಳು ತಿಳಿಸಿವೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಇದಷ್ಟೇ ಅಲ್ಲದೆ, ಇಸ್ಫಹಾನ್ ಸೇರಿದಂತೆ ಇರಾನ್ ನ ಇತರ ಪ್ರಮುಖ ನಗರಗಳನ್ನೂ ಗುರಿಯಾಗಿಸಲಾಗಿದೆ. ಪರಮಾಣು ಸೌಲಭ್ಯಗಳಿಗೆ ಸಮೀಪದಲ್ಲಿರುವುದರಿಂದ ಇಸ್ಫಹಾನ್ ಪ್ರದೇಶದಲ್ಲಿ ಕಳವಳ ಹೆಚ್ಚಾಗಿದೆ. ಅಲ್ಲಿನ ಗವರ್ನರ್ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ ಎಂಬ ವರದಿಗಳೂ ಬಂದಿವೆ.

ಯುನೆಸ್ಕೋ ವಿಶ್ವ ಪಾರಂಪರ್ಯ ತಾಣವಾಗಿ ನೋಂದಾಯಿಸಲ್ಪಟ್ಟಿರುವ ಪುರಾತನ ಅರಮನೆ ಮೇಲೂ ಬಾಂಬ್ ದಾಳಿ ನಡೆದಿದ್ದು, ಆ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News