×
Ad

ಮಧ್ಯಪ್ರಾಚ್ಯ ಸಂಘರ್ಷ | ವಿಶ್ವಾಸಾರ್ಹ ಪಾಲುದಾರರಿಗೆ ಇಂಧನ ಪೂರೈಕೆ ಮುಂದುವರಿಕೆ: ಪುಟಿನ್

Update: 2026-03-09 22:45 IST

ವ್ಲಾಡಿಮಿರ್ ಪುಟಿನ್ | Photo Credit : PTI 

ಮಾಸ್ಕೋ, ಮಾ. 9: ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಹಾಗೂ ಇಂಧನ ಮಾರುಕಟ್ಟೆಗಳಲ್ಲಿ ಉಂಟಾಗಿರುವ ಅಸ್ಥಿರತೆಯ ನಡುವೆಯೇ ರಷ್ಯಾದ ಕಂಪೆನಿಗಳು ಪ್ರಸ್ತುತ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಕ್ರೆಮ್ಲಿನ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಡೆಯುತ್ತಿರುವ ಯುದ್ಧವು ವಿಶ್ವಾದ್ಯಂತ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಎಚ್ಚರಿಸಿದರು. ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಅವಲಂಬಿಸಿರುವ ತೈಲ ಉತ್ಪಾದನೆ ಶೀಘ್ರದಲ್ಲೇ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದರು.

ಯುರೋಪಿನ ಖರೀದಿದಾರರು ‘ರಾಜಕೀಯವಿಲ್ಲದೆ ದೀರ್ಘಾವಧಿಯ ಸಹಕಾರ’ದಲ್ಲಿ ತೊಡಗಿಕೊಳ್ಳಲು ಸಿದ್ಧರಾಗಿದ್ದರೆ ರಷ್ಯಾ ಅವರೊಂದಿಗೆ ಕೆಲಸ ಮಾಡಲು ಸಿದ್ಧವಿದೆ ಎಂದು ಪುಟಿನ್ ಹೇಳಿದರು. ಜೊತೆಗೆ, ಮಾಸ್ಕೋ ತನ್ನ ‘ವಿಶ್ವಾಸಾರ್ಹ ಪಾಲುದಾರರಿಗೆ’ ಇಂಧನ ಸಂಪನ್ಮೂಲಗಳನ್ನು ಪೂರೈಸುವುದನ್ನು ಮುಂದುವರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ರಷ್ಯಾ ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿದ್ದು, ವಿಶ್ವದಲ್ಲೇ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪವನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News