ಇರಾನ್‍ನ ಮತ್ತೊಂದು ಯುದ್ದನೌಕೆಯನ್ನು ಮುಳುಗಿಸಿದ ಅಮೆರಿಕ: ವರದಿ
Update: 2026-03-09 22:22 IST
ಸಾಂದರ್ಭಿಕ ಚಿತ್ರ | Photo Credit : aljazeera.com
ವಾಷಿಂಗ್ಟನ್, ಮಾ.9: ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ ನೇವಿ(ಐಆರ್‍ಜಿಸಿಎನ್) ನಿರ್ವಹಿಸುವ ಶಾಹಿದ್ ಸೊಲೈಮಾನಿ ವರ್ಗದ ಹಡಗು ನಿರೋಧಕ ಕ್ಷಿಪಣಿಗಳಿಂದ ಸಜ್ಜುಗೊಂಡ ಯುದ್ದನೌಕೆ ಅಮೆರಿಕದ ದಾಳಿಯಿಂದ ಮುಳುಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪರ್ಶಿಯನ್ ಕೊಲ್ಲಿಯ ಬಂದರ್ ಲೆಂಗೆಹ್ ಕರಾವಳಿಯಲ್ಲಿ ಅಮೆರಿಕದ ದಾಳಿಯ ಬಳಿಕ ಇರಾನ್ ನೌಕಾಪಡೆಯ ಹಡಗು ಸೋಮವಾರ ಸ್ಫೋಟಗೊಂಡಿದೆ ಎಂದು ಹೇಳಲಾದ ವೀಡಿಯೊ ವೈರಲ್ ಆಗಿದೆ.