×
Ad

ಇರಾನ್ ಸೇನಾ ನೆಲೆಯ ಮೇಲೆ ದಾಳಿ: 7 ಸೇನಾ ಸಿಬ್ಬಂದಿ ಮೃತ್ಯು

Update: 2026-07-15 22:49 IST

ಟೆಹರಾನ್: ಬಾಂಪುರ್‌ನಲ್ಲಿರುವ ಇರಾನ್ ಸೇನಾ ನೆಲೆಯ ಮೇಲೆ ಅಮೆರಿಕ ಮಂಗಳವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ 7 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸೇನೆ ಬುಧವಾರ ತಿಳಿಸಿದೆ.

ಆಗ್ನೇಯ ನಗರವಾದ ಇರಾನ್‌ಶಹರ್ ಬಳಿಯಿರುವ ಈ ಸೇನಾ ನೆಲೆಯ ಅತಿಥಿಗೃಹ, ಕಾವಲುಗಾರರ ಚೌಕಿಗಳು ಮತ್ತು ವಸತಿ ಸೌಕರ್ಯಗಳ ಮೇಲೆ 13 ಕ್ಷಿಪಣಿಗಳು ಅಪ್ಪಳಿಸಿದ್ದು, ಗರಿಷ್ಠ ಪ್ರಮಾಣದ ಪ್ರಾಣಹಾನಿ ಉಂಟು ಮಾಡುವ ಉದ್ದೇಶದಿಂದಲೇ ಈ ದಾಳಿಗಳನ್ನು ನಡೆಸಲಾಗಿದೆ. ಹಲವು ಸಿಬ್ಬಂದಿ ಗಾಯಗೊಂಡಿದ್ದು, ಈ ದಾಳಿಗೆ `ದೃಢವಾದ ಪ್ರತಿಕ್ರಿಯೆ' ನೀಡುವುದಾಗಿ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News