×
Ad

ಅಮೆರಿಕದೊಂದಿಗಿನ ಒಪ್ಪಂದದಿಂದ ಹಿಂದೆ ಸರಿದ ಇರಾನ್

Update: 2026-07-15 22:24 IST

ಸಾಂದರ್ಭಿಕ ಚಿತ್ರ | Photo Credit : PTI

ಟೆಹರಾನ್, ಜು.15: ಹಗೆತನವನ್ನು ಕೊನೆಗೊಳಿಸಲು ಕಳೆದ ತಿಂಗಳು ಮಾಡಿಕೊಂಡಿದ್ದ ಒಪ್ಪಂದವನ್ನು ವಾಷಿಂಗ್ಟನ್ ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿರುವ ಇರಾನ್, ಅಮೆರಿಕದೊಂದಿಗಿನ ತಿಳುವಳಿಕಾ ಒಪ್ಪಂದದಿಂದ (MOU) ಅಧಿಕೃತವಾಗಿ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ಬುಧವಾರ ಘೋಷಿಸಿದೆ.

ಅಮೆರಿಕವು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುವ ಜೊತೆಗೆ, ಇರಾನ್ ಬಂದರುಗಳ ಮೇಲೆ ಹೊಸದಾಗಿ ನೌಕಾ ದಿಗ್ಬಂಧನವನ್ನು ಹೇರುವ ಮೂಲಕ ಒಪ್ಪಂದವನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ. ಆದ್ದರಿಂದ, ಒಪ್ಪಂದದ ನಿಯಮಗಳನ್ನು ಪಾಲಿಸಲು ತಾನು ಇನ್ನು ಮುಂದೆ ಬದ್ಧವಾಗಿರುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಯಾವುದೇ ಪರಿಸ್ಥಿತಿ ಬಂದರೂ ಇರಾನ್ ಹಾರ್ಮುಝ್ ಜಲಸಂಧಿಯ ಮೇಲೆ ತನ್ನ ಸಂಪೂರ್ಣ ಸಾರ್ವಭೌಮತ್ವವನ್ನು ಚಲಾಯಿಸಲಿದೆ. ಇದು ಒಮಾನ್‌ ದೇಶಕ್ಕೆ ಸೇರಿರುವ ಅರ್ಧ ಭಾಗವನ್ನೂ ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಈ ಜಲಸಂಧಿಯನ್ನು ಜಂಟಿಯಾಗಿ ನಿಯಂತ್ರಿಸುವ ಎರಡು ದೇಶಗಳಲ್ಲಿ ಒಮಾನ್‌ ಕೂಡ ಒಂದಾಗಿದ್ದರೂ, ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ, ಪ್ರಸ್ತುತ ಯುದ್ಧದ ಸನ್ನಿವೇಶದಲ್ಲಿ ಇರಾನ್ ಇಡೀ ಜಲಸಂಧಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಇರಾನ್‌ ನ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ಹೇಳಿರುವುದಾಗಿ ತಸ್ನೀಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News