ಇರಾನ್ ವಿರುದ್ಧ ಮತ್ತೆ ಅಮೆರಿಕ ನೌಕಾ ದಿಗ್ಬಂಧನ; 20ಕ್ಕೂ ಹೆಚ್ಚು ಯುದ್ಧನೌಕೆಗಳ ನಿಯೋಜನೆ
Update: 2026-07-15 22:36 IST
ವಾಷಿಂಗ್ಟನ್, ಜು.15: ಇರಾನ್ ವಿರುದ್ಧದ ತನ್ನ ನೌಕಾ ದಿಗ್ಬಂಧನವನ್ನು ಮತ್ತೆ ಜಾರಿಗೊಳಿಸಿರುವುದನ್ನು ಅಮೆರಿಕ ಸೇನೆ ಖಚಿತಪಡಿಸಿದೆ. ಅಮೆರಿಕದ ಪಡೆಗಳು ಇರಾನ್ ಬಂದರುಗಳು ಮತ್ತು ಕರಾವಳಿ ಪ್ರದೇಶಗಳಿಗೆ ಬರುವ ಹಾಗೂ ಅಲ್ಲಿಂದ ಹೊರಡುವ ಹಡಗುಗಳ ಸಂಚಾರವನ್ನು ನಿರ್ಬಂಧಿಸುತ್ತಿವೆ.
ಪ್ರಸ್ತುತ ಮಧ್ಯಪ್ರಾಚ್ಯದಾದ್ಯಂತ 20ಕ್ಕೂ ಹೆಚ್ಚು ನೌಕಾಪಡೆಯ ಯುದ್ಧನೌಕೆಗಳು ಮತ್ತು ನೂರಾರು ಮಿಲಿಟರಿ ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಹೇಳಿದೆ.