ಭಾರತದ `ತ್ರಿಶೂಲ್' ಸಮರಾಭ್ಯಾಸದ ಹಿನ್ನೆಲೆ : ಹೈ ಅಲರ್ಟ್ ಘೋಷಿಸಿದ ಪಾಕ್
Update: 2025-10-25 22:42 IST
Photo credit:indiatoday
ಇಸ್ಲಮಾಬಾದ್, ಅ.25: ಅಕ್ಟೋಬರ್ ಅಂತ್ಯದಲ್ಲಿ ಭಾರತವು ಪಾಕಿಸ್ತಾನದ ಗಡಿಭಾಗದ ಸರ್ ಕ್ರೀಕ್‍ನಲ್ಲಿ ತನ್ನ ಮೂರೂ ಪಡೆಗಳ ಸಮರಾಭ್ಯಾಸಕ್ಕೆ ಸಿದ್ಧತೆ ನಡೆಸುತ್ತಿರುವಂತೆಯೇ ಪಾಕಿಸ್ತಾನ ತನ್ನ ಹಲವು ಕಮಾಂಡ್‍ಗಳು ಹಾಗೂ ಸೇನಾ ನೆಲೆಗಳನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿ ಇರಿಸಿರುವುದಾಗಿ ಸಿಎನ್‍ಎನ್ ನ್ಯೂಸ್ 18 ವರದಿ ಮಾಡಿದೆ.
ಮುಂದಿನ ವಾರ ಮಧ್ಯ ಮತ್ತು ದಕ್ಷಿಣದ ವಾಯುಪ್ರದೇಶದಾದ್ಯಂತ ಹಲವಾರು ವಾಯುಸಂಚಾರ ಮಾರ್ಗಗಳನ್ನು ನಿರ್ಬಂಧಿಸಿರುವುದಾಗಿ ಶನಿವಾರ ಅಧಿಸೂಚನೆ ಹೊರಡಿಸಲಾಗಿದೆ. ಹಲವು ಕಮಾಂಡ್‍ಗಳು ಹಾಗೂ ನೆಲೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಯಾವುದೇ ಸಂಭಾವ್ಯ ಆಕ್ರಮಣದ ತುರ್ತುಪರಿಸ್ಥಿತಿಗೆ ಸನ್ನದ್ಧವಾಗಿರುವಂತೆ ವಾಯುಪಡೆ ಮತ್ತು ನೌಕಾ ಪಡೆಯನ್ನು ಸಜ್ಜುಗೊಳಿಸಿದೆ ಮತ್ತು ಅರೆಬಿಯನ್ ಸಮುದ್ರದಲ್ಲಿ ಗಸ್ತನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ.