ಬಾಲಾಸೋರ್ ದುರಂತಕ್ಕೆ ಸ್ಟೇಷನ್ ಮಾಸ್ಟರ್ ಲೋಪ ಕಾರಣ: ರೈಲ್ವೆ ತನಿಖಾ ವರದಿ
ಭುವನೇಶ್ವರ: ಒಡಿಶಾದ ಬಾಲಾಸೋರಿನಲ್ಲಿ 294 ಮಂದಿಯ ಸಾವಿಗೆ ಕಾರಣವಾಗಿದ್ದ ರೈಲು ದುರಂತಕ್ಕೆ ರೈಲ್ವೆ ಸ್ಟೇಷನ್ ಮಾಸ್ಟರ್ ಅವರ ಲೋಪಗಳು ಕಾರಣ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ರಾಸ್ ಓವರ್ ಪಾಯಿಂಟ್ ನಲ್ಲಿ ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಯ 'ವಿಚಿತ್ರ ನಡವಳಿಕೆ' ಪದೇ ಪದೇ ಕಂಡುಬರುತ್ತಿದ್ದ ಅಂಶವನ್ನು ವರದಿ ಮಾಡಿದ್ದರೆ ದುರಂತ ತಪ್ಪಿಸಬಹುದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಕ್ರಾಸ್ ಓವರ್ ಪಾಯಿಂಟ್ ನಲ್ಲಿ ತಪ್ಪು ಸಿಗ್ನಲ್ ಬಂದ ಕಾರಣ ಕೋರಮಂಡಲ ಎಕ್ಸ್ಪ್ರೆಸ್ ರೈಲು ತಪ್ಪಾಗಿ ಲೂಪ್ ಲೈನ್ ಪ್ರವೇಶಿಸಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು ಎಂದು ರೈಲ್ವೆ ಸುರಕ್ಷತಾ ಆಯುಕ್ತರ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.
"ಸಿಗ್ನಲಿಂಗ್ ಕಾರ್ಯನಿರ್ವಹಣೆಯಲ್ಲಿ ಲೋಪಗಳು ಇದ್ದ ಹೊರತಾಗಿಯೂ ಸಿಬ್ಬಂದಿ, ಕ್ರಾಸ್ಓವರ್ 17ಎ/ಬಿಯ ಸರ್ಕ್ಯೂಟ್ ಗಾಗಿ ತಪ್ಪು ಫೀಡಿಂಗ್ ಎಲೆಕ್ಟ್ರಿಕ್ ಇಂಟರ್ ಲಾಕಿಂಗ್ ಲಾಜಿಕ್ ವರೆಗೂ ವಿಸ್ತರಿಸಿರುವುದನ್ನು ಪತ್ತೆ ಮಾಡಬಹುದಿತ್ತು ಎಂದು ಸಿಗ್ನಲ್ ಹಾಗೂ ಟೆಲಿಕಾಂ ವಿಭಾಗದ ಹಲವು ವೈಫಲ್ಯಗಳನ್ನು ವರದಿಯಲ್ಲಿ ಎತ್ತಿಹಿಡಿಯಲಾಗಿದೆ.