×
Ad

ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಸೀನಾ ವಿರುದ್ಧ ಅಧಿಕೃತ ದೋಷಾರೋಪಣೆ

Update: 2025-07-10 21:30 IST

 ಶೇಖ್ ಹಸೀನಾ | PC: PTI 

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿಶೇಖ್ ಹಸೀನಾ ಅವರನ್ನು ಮಾನವೀಯತೆಯ ವಿರುದ್ಧ ಅಪರಾಧ ಪ್ರಕರಣದಲ್ಲಿ ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಅಧಿಕೃತವಾಗಿ ದೋಷಾರೋಪಣೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಸ್ಟಿಸ್ ಗೊಲಾಮ್ ಮೊರ್ತುಜಾ ಮೊಝುಮ್ದಾರ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠವು ಹಸೀನಾ, ಮಾಜಿ ಗೃಹ ಸಚಿವ ಅಸಾದುಝ್ಜಮಾನ್ ಖಾನ್ ಹಾಗೂ ಮಾಜಿ ಪೊಲೀಸ್ ಮುಖ್ಯಸ್ಥ ಚೌಧುರಿ ಅಬ್ದುಲ್ಲಾ ಅಲ್-ಮಮೂನ್‍ ರನ್ನು ಐದು ಆರೋಪಗಳಲ್ಲಿ ದೋಷಾರೋಪಣೆ ಮಾಡಿದೆ. ಹಸೀನಾ ಹಾಗೂ ಖಾನ್ ಅವರನ್ನು ಗೈರುಹಾಜರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಆಗಸ್ಟ್ 3ರಂದು ಪ್ರಾಸಿಕ್ಯೂಷನ್‍ ನ ಪ್ರಾಥಮಿಕ ಹೇಳಿಕೆ ಮತ್ತು ಆಗಸ್ಟ್ 4ರಂದು ಸಾಕ್ಷಿಗಳ ಹೇಳಿಕೆ ದಾಖಲಿಸಲು ದಿನಾಂಕಗಳನ್ನು ನ್ಯಾಯಮಂಡಳಿ ನಿಗದಿಗೊಳಿಸಿದೆ. ಕಳೆದ ವರ್ಷ ಅವಾಮಿ ಲೀಗ್ ಪಕ್ಷದ ಸರಕಾರ ಪದಚ್ಯುತಗೊಂಡ ಬಳಿಕ ಆಗಸ್ಟ್ 5ರಂದು ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News