ತಾರಿಕ್ ರೆಹಮಾನ್  | Photo Credit : AP , PTI 

ವಿಶ್ವಸಂಸ್ಥೆ, ಸೆ.25: ಬಾಂಗ್ಲಾದೇಶವು 2024ರಲ್ಲಿ ಫ್ಯಾಸಿಸಂನಿಂದ ಮುಕ್ತವಾಯಿತು ಮತ್ತು ಫ್ಯಾಸಿಸ್ಟ್ ಆಡಳಿತ ಹಾಗೂ ಶೋಷಣೆಯಿಂದ ಜರ್ಜರಿತಗೊಂಡಿದ್ದ ದೇಶವನ್ನು ‘ಸರಿಪಡಿಸಲು’ ಸರಕಾರವು ಚೇತರಿಕೆ, ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣದ ತಂತ್ರವನ್ನು ಅನುಸರಿಸುತ್ತಿದೆ ಎಂದು ಪ್ರಧಾನಿ ತಾರಿಕ್ ರೆಹಮಾನ್ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಸಭೆಯಲ್ಲಿ ಬಂಗಾಳಿ ಭಾಷೆಯಲ್ಲಿ ಭಾಷಣ ಮಾಡಿದ ರೆಹಮಾನ್, ‘ಫ್ಯಾಸಿಸ್ಟ್ ಆಡಳಿತದಲ್ಲಿ ಸಾಮಾನ್ಯವಾಗಿದ್ದ ಬಲವಂತದ ನಾಪತ್ತೆಗಳು, ಹತ್ಯೆಗಳು, ಅಪಹರಣಗಳು, ಭ್ರಷ್ಟಾಚಾರ, ಕೊಳ್ಳೆ ಹೊಡೆಯುವುದು ಮತ್ತು ಅಕ್ರಮ ಹಣ ವರ್ಗಾವಣೆಯಂತಹ ಪಿಡುಗುಗಳಿಂದ ಮುಕ್ತವಾದ ಬಾಂಗ್ಲಾದೇಶವು ಈಗ ಮತ್ತೆ ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗುತ್ತಿದೆ’ ಎಂದು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor