Photo Credit : NDTV 

ವಿಶ್ವಸಂಸ್ಥೆ, ಸೆ.25: ಇಸ್ರೇಲ್ ಪ್ರಧಾನಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಾರಂಭಿಸಿದಂತೆ, ವಿಶ್ವಸಂಸ್ಥೆಯಲ್ಲಿನ ಇರಾನ್ನ ಡೆಸ್ಕ್ ನ (ಮೇಜಿನ) ಮೇಲೆ ದಿವಂಗತ ಇರಾನ್ ಕಮಾಂಡರ್ ಖಾಸೆಮ್ ಸೊಲೈಮಾನಿ ಅವರ ಭಾವಚಿತ್ರವನ್ನು ಇಡಲಾಗಿತ್ತು.

ನೆತನ್ಯಾಹು ವೇದಿಕೆಗೆ ಬರುತ್ತಿದ್ದಂತೆ ಇರಾನ್ ನ ಪ್ರತಿನಿಧಿಗಳು ಸಭಾಂಗಣದಿಂದ ಹೊರನಡೆದರು. ಆದರೆ ಇರಾನ್ ನಿಯೋಗಕ್ಕಾಗಿ ಕಾಯ್ದಿರಿಸಲಾದ ಡೆಸ್ಕ್ನಲ್ಲಿ ಸೊಲೈಮಾನಿ ಅವರ ಭಾವಚಿತ್ರವು ಹಾಗೆಯೇ ಉಳಿದಿತ್ತು. ಸೊಲೈಮಾನಿ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ (ಐಜಿಸಿ) ವಿದೇಶಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ‘ಖುದ್ಸ್ ಫೋರ್ಸ್’ನ ಮಾಜಿ ಕಮಾಂಡರ್ ಆಗಿದ್ದರು. ಜನವರಿ 2020ರಲ್ಲಿ ಬಗ್ದಾದ್ ವಿಮಾನ ನಿಲ್ದಾಣದ ಬಳಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಅವರು ಹತರಾಗಿದ್ದರು. ಈ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor