ಅಬ್ಬಾಸ್ ಅರಾಘ್ಚಿ

ಟೆಹರಾನ್, ಸೆ.25: ಪ್ರಸ್ತುತ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು, ಹಾರ್ಮುಝ್ ಜಲಸಂಧಿಯನ್ನು ಮರುಸಂಪರ್ಕಿಸಲು ಹಾಗೂ ಇರಾನ್ ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದೊಂದಿಗೆ ಸಮಗ್ರ ಮಾತುಕತೆಯನ್ನು ಪುನರಾರಂಭಿಸಲು ಏಳು ದಿನಗಳ ಮಾರ್ಗಸೂಚಿಯನ್ನು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಪ್ರಸ್ತಾಪಿಸಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಇರಾನ್ ಈ ಪ್ರಸ್ತಾವನೆಯನ್ನು ಮಧ್ಯಸ್ಥಿಕೆದಾರರ ಮೂಲಕ ಅಮೆರಿಕಕ್ಕೆ ತಲುಪಿಸಿದೆ. ಈ ಯೋಜನೆಯಡಿ, ಕೆಲವು ಷರತ್ತುಗಳನ್ನು ಈಡೇರಿಸಿದರೆ ಏಳನೇ ದಿನದ ಅಂತ್ಯದ ವೇಳೆಗೆ ಇರಾನ್ ಹಾರ್ಮುಝ್ ಜಲಸಂಧಿಯನ್ನು ತೆರೆಯಲಿದ್ದು, ಅದರ ನಂತರ ಪರಮಾಣು ಮಾತುಕತೆಗಳು ಪುನರಾರಂಭಗೊಳ್ಳಲಿವೆ ಎಂದು ಅರಾಘ್ಚಿ ಹೇಳಿರುವುದಾಗಿ ವರದಿ ತಿಳಿಸಿದೆ.

ಈ ಮಧ್ಯೆ, ಹೋರಾಟವನ್ನು ಮುಂದುವರಿಸಲು ಇರಾನ್ ಬಯಸುವುದಿಲ್ಲ ಮತ್ತು ಯುದ್ಧವನ್ನು ಕೊನೆಗೊಳಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಈಗ ಅಮೆರಿಕಕ್ಕೆ ಸೇರಿದ್ದು. ಮಿಲಿಟರಿ ಕಾರ್ಯಾಚರಣೆಯ ಬದಲಿಗೆ ಮಾತುಕತೆಯ ಮೂಲಕ ಅಮೆರಿಕದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಟೆಹರಾನ್ ಸಿದ್ಧವಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor