×
Ad

ಆಕ್ಷೇಪಾರ್ಹ ವರ್ತನೆ ಕ್ಷಮೆ ಯಾಚಿಸಿದ ಬಿಬಿಸಿ ನಿರೂಪಕಿ

Update: 2023-12-08 22:40 IST

Photocredit: BBC news

ಲಂಡನ್: ಬಿಬಿಸಿಯಲ್ಲಿ ನೇರ ಪ್ರಸಾರದ ಸಂದರ್ಭ ಮಧ್ಯದ ಬೆರಳು ತೋರಿಸಿ ವ್ಯಾಪಕ ಟೀಕೆಗೆ ಗುರಿಯಾದ ಸುದ್ಧಿನಿರೂಪಕಿ ತಮ್ಮ ಕೃತ್ಯಕ್ಕಾಗಿ ಕ್ಷಮೆ ಯಾಚಿಸಿದ್ದಾರೆ.

ಬುಧವಾರ ನೇರ ಪ್ರಸಾರದ ಸಂದರ್ಭ ಬಿಬಿಸಿಯ ಸುದ್ಧಿ ನಿರೂಪಕಿ ಮರ್ಯಮ್ ಮೊಷಿರಿ ಕ್ಯಾಮೆರಾದತ್ತ ಮಧ್ಯದ ಬೆರಳು ತೋರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮಾಧ್ಯಮ ಸಂಸ್ಥೆಯ ವೃತ್ತಿಪರತೆ ಬಗ್ಗೆ ಹಲವರು ಸಂಶಯ ವ್ಯಕ್ತಪಡಿಸಿದ್ದರು. ಬುಧವಾರ ಮಧ್ಯಾಹ್ನದ ಸುದ್ಧಿಪ್ರಸಾರದ ಸಂದರ್ಭ ಈ ಘಟನೆ ನಡೆದಿತ್ತು.

ಸುದ್ಧಿ ವಾಚಿಸುವ ಡೆಸ್ಕ್ ಎದುರು ಕುಳಿತಿದ್ದ ಮೊಷಿರಿ ಕ್ಯಾಮೆರಾದತ್ತ ಮುಖಮಾಡಿ ವ್ಯಂಗ್ಯದ ನಗೆ ಬೀರುತ್ತಾ ಮಧ್ಯದ ಬೆರಳನ್ನು ತೋರಿಸಿದ್ದರು. ಕ್ಯಾಮೆರಾ ಆನ್ ಆಗಿದೆ ಎಂಬುದನ್ನು ತಕ್ಷಣ ಅರಿತುಕೊಂಡ ಮೊಷಿರಿ ಸಾವರಿಸಿಕೊಂಡು `ದಿಸ್ ಈಸ್ ಬಿಬಿಸಿ ನ್ಯೂಸ್.. ಲೈವ್ ಪ್ರಮ್ ಲಂಡನ್' ಎಂದು ಸುದ್ಧಿ ನಿರೂಪಣೆ ಆರಂಭಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News