Pakistan | ಕ್ವೆಟ್ಟಾ ಬಳಿ ಟಿಟಿಪಿಯಿಂದ ಭೀಕರ ದಾಳಿ; 6 ಜನ ಮೃತ್ಯು , 9 ಮಂದಿಗೆ ಗಾಯ
Update: 2026-07-06 19:51 IST
Photo Credit : AP
ಕ್ವೆಟ್ಟಾ, ಜು.6: ಪಾಕಿಸ್ತಾನದ ಪ್ರಾಂತೀಯ ರಾಜಧಾನಿಯಾದ ಕ್ವೆಟ್ಟಾ ಬಳಿ ಭಯೋತ್ಪಾದಕರು ನಡೆಸಿರುವ ಭೀಕರ ದಾಳಿಯಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದು, ಇತರ 9 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಭಾರೀ ಶಸ್ತ್ರಸಜ್ಜಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯ ಸದಸ್ಯರು ಕ್ವೆಟ್ಟಾದ ಹೊರವಲಯದಲ್ಲಿರುವ ಹನ್ನಾ ಉರಾಕ್ ಪ್ರದೇಶದ `ಕಿಲ್ಲಿ ಬಾಬ್ರಿ' ಎಂಬ ವಸತಿ ಪ್ರದೇಶದ ಮೇಲೆ ದಾಳಿ ನಡೆಸಿದ್ದಾರೆ.
ಈ ಗುಂಡಿನ ಚಕಮಕಿಯ ವೇಳೆ ಕನಿಷ್ಠ 6 ಮಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. ದಾಳಿಯ ಬೆನ್ನಲ್ಲೇ ಪಾಕಿಸ್ತಾನದ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು, ಭಯೋತ್ಪಾದಕರನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ವರದಿ ತಿಳಿಸಿದೆ.