×
Ad

ಗಾಝಾ ಆಡಳಿತ ಮಂಡಳಿ ವಿಸರ್ಜಿಸಿದ ಹಮಾಸ್: ವರದಿ

Update: 2026-07-06 22:00 IST

Photo Credit : AP, PTI 

ಗಾಝಾ, ಜು.6: ಕಳೆದ ಸುಮಾರು ಎರಡು ದಶಕಗಳಿಂದ ಗಾಝಾ ಪಟ್ಟಿಯನ್ನು ಆಳುತ್ತಿದ್ದ ಆಡಳಿತ ಮಂಡಳಿಯನ್ನು ಹಮಾಸ್ ವಿಸರ್ಜಿಸಿದೆ ಎಂದು ಆ ಸಂಘಟನೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಕ್ರಮವು ಹಮಾಸ್‍ನ ರಾಜಕೀಯ ನಿಲುವಿನಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ನಾಗರಿಕ ಆಡಳಿತವನ್ನು ಜಾರಿಗೆ ತರಲು ಫೆಲೆಸ್ತೀನಿಯನ್ ತಾಂತ್ರಿಕ ಸಮಿತಿಗೆ ದಾರಿ ಮಾಡಿಕೊಟ್ಟಿದೆ.

`ಹಮಾಸ್ ಸಂಘಟನೆಯು ಗಾಝಾ ಸರಕಾರಿ ಸಮಿತಿಯನ್ನು ವಿಸರ್ಜಿಸಲು ನಿರ್ಧರಿಸಿದೆ. ಅಲ್ಲದೆ ಗಾಝಾ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿ'ಯು ಅಧಿಕೃತವಾಗಿ ತನ್ನ ಜವಾಬ್ದಾರಿಗಳನ್ನು ವಹಿಸಿಕೊಳ್ಳುವವರೆಗೆ, ಈ ಸಮಿತಿಯ ಕೆಲಸವನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯವಾಗಿ ಒಪ್ಪಿತ ವ್ಯಕ್ತಿಯೊಬ್ಬರನ್ನು ನೇಮಿಸಲು ನಿರ್ಧರಿಸಿದೆ. ಇತ್ತೀಚೆಗೆ ಕೈರೋದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯು ಈ ಕ್ರಮದ ಬಗ್ಗೆ ಇತರ ಫೆಲೆಸ್ತೀನಿಯನ್ ಬಣಗಳಿಗೆ ಈಗಾಗಲೇ ಮಾಹಿತಿ ನೀಡಿದೆ ಎಂದು ಹಮಾಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News