ಬಾಂಬ್ ಬೆದರಿಕೆ: ಐಫೆಲ್ ಟವರ್‌ನಿಂದ ಸಾರ್ವಜನಿಕರನ್ನು ತೆರವುಗೊಳಿಸಿದ ಅಧಿಕಾರಿಗಳು
Update: 2023-08-12 19:59 IST
Photo: Twitter \ @CatholicArena
ಪ್ಯಾರಿಸ್: ವಿಶ್ವದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ ಕರೆ ಬಂದ ಬಳಿಕ, ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.
ಪ್ರವಾಸಿಗರಿಗೆ ಹಾಗೂ ಸಾರ್ವಜನಿಕ ಪ್ರವೇಶವನ್ನು ಸಹ ಮುಚ್ಚಲಾಗಿದೆ.
ಬಾಂಬೆ ಬೆದರಿಕೆ ಬಂದಿದ್ದು, ತಕ್ಷಣವೇ ಐಫೆಲ್ ಟವರ್ ನ ಮೂರು ಮಹಡಿಗಳಲ್ಲಿದ್ದ ಎಲ್ಲರನ್ನೂ ಸ್ಥಳದಿಂದ ತೆರವುಗೊಳಿಸಲಾಗಿದೆ.
ಸ್ಥಳದಲ್ಲಿ ಐಫೆಲ್ ಟವರ್‌ನ ಭದ್ರತಾ ಸಿಬ್ಬಂದಿಗಳು, ಬಾಂಬ್ ತಜ್ಞರು ಮತ್ತು ಫ್ರೆಂಚ್ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.
PARIS
— Catholic Arena (@CatholicArena) August 12, 2023
Eiffel Tower evacuated due to BOMB threat pic.twitter.com/gioNTqGEzd