×
Ad

ನೈಜೀರಿಯಾದಲ್ಲಿ ಕಾರು ಅಪಘಾತ: ಬ್ರಿಟನ್‌ನ ಬಾಕ್ಸರ್ ಆಂಥೋನಿ ಜೋಶುವಾಗೆ ಗಾಯ

Update: 2025-12-29 22:23 IST

ಆಂಥೋನಿ ಜೋಶು | Photo Credit : NDTV

ಲಾಗೋಸ್: ನೈಜೀರಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಬ್ರಿಟನ್‌ ನ ಹೆವಿವೇಯ್ಟ್ ಬಾಕ್ಸಿಂಗ್ ತಾರೆ ಆಂಥೋನಿ ಜೋಶುವಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಓಗುನ್ ರಾಜ್ಯ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ನೈರುತ್ಯ ನೈಜೀರಿಯಾದ ಓಗುನ್ ರಾಜ್ಯದ ಜನನಿಬಿಡ ಲಾಗೋಸ್–ಇಬಾಡಾನ್ ಎಕ್ಸ್‌ಪ್ರೆಸ್‌ ವೇಯಲ್ಲಿ ಜೋಶುವಾ ಪ್ರಯಾಣಿಸುತ್ತಿದ್ದ ಎಸ್‌ಯುವಿ ವಾಹನವು ನಿಂತಿದ್ದ ಟ್ರಕ್‌ ಗೆ ಡಿಕ್ಕಿ ಹೊಡೆದಿದೆ. ಸೋಮವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, ಜೋಶುವಾ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಅಪಘಾತದ ಬಳಿಕ ಜೋಶುವಾ ಪ್ರಜ್ಞೆಯಲ್ಲೇ ಇದ್ದರು. ಅವರಿಗೆ ಗಂಭೀರ ಗಾಯಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ವಾಹನದ ಅವಶೇಷಗಳು ಮತ್ತು ಮುರಿದ ಗಾಜಿನ ನಡುವೆ ಕುಳಿತಿದ್ದ ಜೋಶುವಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಜೋಶುವಾ ಪ್ರಯಾಣಿಸುತ್ತಿದ್ದ ವಾಹನದಲ್ಲಿ ಒಟ್ಟು ನಾಲ್ವರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತಪಟ್ಟ ಇಬ್ಬರ ಗುರುತು ಹಾಗೂ ಇತರ ವಿವರಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಅಪಘಾತದ ವೇಳೆ ಜೋಶುವಾ ಅವರ ಭದ್ರತಾ ಸಿಬ್ಬಂದಿ ಪ್ರತ್ಯೇಕ ವಾಹನದಲ್ಲಿ ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ.

ಅಪಘಾತಕ್ಕೆ ಕೆಲವೇ ಗಂಟೆಗಳ ಮೊದಲು ಜೋಶುವಾ ಅವರು ಟೇಬಲ್ ಟೆನಿಸ್ ಆಡುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ ವಾಹನದ ಟೈರ್ ಒಡೆದು ಚಾಲಕನ ನಿಯಂತ್ರಣ ತಪ್ಪಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News