ಬುರ್ಕಿನಾ ಫಾಸೊ | ಚರ್ಚ್ ಮೇಲೆ ದಾಳಿ; 15 ಮಂದಿ ಮೃತ್ಯು
Update: 2024-02-26 22:25 IST
Photo: X \ @Sachinettiyil
ಔಗಡೌಗೊ : ಉತ್ತರ ಬುರ್ಕಿನಾ ಫಾಸೊದ ಕ್ಯಾಥೊಲಿಕ್ ಚರ್ಚ್‍ನಲ್ಲಿ ರವಿವಾರದ ಸಾಮೂಹಿಕ ಪ್ರಾರ್ಥನೆ ಸಂದರ್ಭ ಚರ್ಚ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 15 ನಾಗರಿಕರು ಮೃತಪಟ್ಟು ಇತರ ಇಬ್ಬರು ಗಾಯಗೊಂಡಿರುವುದಾಗಿ ಚರ್ಚ್ ಅಧಿಕಾರಿಗಳು ಹೇಳಿದ್ದಾರೆ.
ಎಸ್ಸಾಕಾನೆ ಗ್ರಾಮದ ಕ್ಯಾಥೊಲಿಕ್ ಚರ್ಚ್ ಮೇಲೆ ರವಿವಾರದ ಪ್ರಾರ್ಥನೆ ಸಂದರ್ಭ ದಾಳಿ ನಡೆದಿದೆ. ಪ್ರಾಥಮಿಕ ಮಾಹಿತಿಯಂತೆ 15 ಮಂದಿ ಮೃತಪಟ್ಟಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಚರ್ಚ್‍ನ ಮುಖ್ಯಸ್ಥ ಜೀನ್ ಪಿಯರೆ ಸವಡೊಗೊ ಹೇಳಿದ್ದಾರೆ. `ಮೂರು ಗಡಿಗಳ ಪ್ರದೇಶ' ಎಂದು ಕರೆಯಲ್ಪಡುವ ಎಸ್ಸಾಕಾನೆ ಗ್ರಾಮ ಬುರ್ಕಿನಾ ಫಾಸೊ, ಮಾಲಿ ಮತ್ತು ನೈಜರ್ ದೇಶಗಳ ಗಡಿಗಳು ಸಂಧಿಸುವ ಪ್ರದೇಶದಲ್ಲಿದ್ದು ಇಲ್ಲಿ ಕ್ರಿಶ್ಚಿಯನ್ ಸಮುದಾಯದವರನ್ನು ಗುರಿಯಾಗಿಸಿದ ದಾಳಿಗಳು ಹೆಚ್ಚಿವೆ.