×
Ad

ಐಸಿಇ ಏಜೆನ್ಸಿಯ ರದ್ದತಿಗೆ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಆಗ್ರಹ

Update: 2026-01-27 22:11 IST

ಝೊಹ್ರಾನ್ ಮಮ್ದಾನಿ | Photo Credit : AP \ PTI 

ನ್ಯೂಯಾರ್ಕ್, ಜ.27: ಅಮೆರಿಕಾದ `ವಲಸೆ ಮತ್ತು ಕಸ್ಟಮ್ಸ್ ಅನುಷ್ಠಾನ(ಐಸಿಇ) ಏಜೆನ್ಸಿಯನ್ನು ತಕ್ಷಣ ರದ್ದುಗೊಳಿಸಬೇಕೆಂದು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಮಂಗಳವಾರ ಆಗ್ರಹಿಸಿದ್ದಾರೆ.

ಹಾಡಹಗಲೇ ಐಸಿಇ ಅಧಿಕಾರಿಗಳು ಮಿನಿಯಾಪೋಲಿಸ್‍ನಲ್ಲಿ ರೀನ್ ಗುಡ್ ಮತ್ತು ಅಲೆಕ್ಸ್ ಪ್ರೆಟ್ಟಿಯನ್ನು ವಿನಾಕಾರಣ ಹತ್ಯೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಭೀತಿಯನ್ನು ಮೂಡಿಸಿದ್ದಾರೆ. ಪ್ರತೀ ದಿನ ಜನರನ್ನು ಕಾರಿನಿಂದ, ಮನೆಯಿಂದ ಎಳೆದು ಹಾಕುವುದನ್ನು ನಾವು ನೋಡುತ್ತಿದ್ದೇವೆ. ಈ ಕ್ರೌರ್ಯವನ್ನು ನೋಡುತ್ತಾ ಇರಲು ಸಾಧ್ಯವಿಲ್ಲ. ತಕ್ಷಣ ಐಸಿಇಯನ್ನು ರದ್ದುಗೊಳಿಸಿ' ಎಂದು ಆಗ್ರಹಿಸಿ ಮಮ್ದಾನಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News