×
Ad

ಅಮೆರಿಕಾದಲ್ಲಿ ಚಳಿಗಾಳಿ, ಹಿಮಪಾತಕ್ಕೆ ಕನಿಷ್ಠ 30 ಮಂದಿ ಮೃತ್ಯು: ವರದಿ

Update: 2026-01-27 22:08 IST

Photo Credit : aljazeera.com

ವಾಷಿಂಗ್ಟನ್, ಜ.27: ಅಮೆರಿಕಾದಲ್ಲಿ ತೀವ್ರ ಚಳಿಗಾಲ ಮತ್ತು ಹಿಮಪಾತವು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು ಕನಿಷ್ಠ 30 ಮಂದಿ ಮೃತಪಟ್ಟಿರುವುದಾಗಿ ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕಡಿಮೆ ಉಷ್ಣತೆ, ಹಿಮಪಾತದಿಂದಾಗಿ ರಸ್ತೆ ಅಪಘಾತ ಇತ್ಯಾದಿ ಕಾರಣಗಳಿಂದಾಗಿ ಪ್ರಾಣಹಾನಿ ಸಂಭವಿಸಿದೆ. ಸಾವಿರಾರು ವಿಮಾನಯಾನಗಳನ್ನು ರದ್ದುಗೊಳಿಸಿದ್ದು ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ರಸ್ತೆಗಳು ಹಿಮಾವೃತಗೊಂಡಿರುವುದರಿಂದ ವಾಹನ ಸಂಚಾರ ದುಸ್ತರಗೊಂಡಿದ್ದು ವಾಷಿಂಗ್ಟನ್ ಡಿಸಿ ಸೇರಿದಂತೆ ಕನಿಷ್ಠ 20 ರಾಜ್ಯಗಳಲ್ಲಿ ತುರ್ತು ಕಾರ್ಯಪಡೆಯ ಸಿಬ್ಬಂದಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News