×
Ad

ವಿಶ್ವಸಂಸ್ಥೆ ಆಧಾರಿತ ಜಾಗತಿಕ ವ್ಯವಸ್ಥೆ ಎತ್ತಿಹಿಡಿಯಲು ಚೀನಾ ಪ್ರಯತ್ನಿಸುತ್ತಿದೆ: ಕ್ಸಿ ಜಿಂಪಿಂಗ್

Update: 2026-01-27 22:13 IST

ಕ್ಸಿ ಜಿಂಪಿಂಗ್ | Photo Credit : PTI 

ಬೀಜಿಂಗ್, ಜ.27: ವಿಶ್ವಸಂಸ್ಥೆ ಆಧಾರಿತ ಜಾಗತಿಕ ವ್ಯವಸ್ಥೆಯನ್ನು ಎತ್ತಿಹಿಡಿಯಲು ಚೀನಾ ಬಯಸುತ್ತಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಮಂಗಳವಾರ ಹೇಳಿದ್ದಾರೆ.

ಫಿನ್ಲ್ಯಾಂಡ್ ಪ್ರಧಾನಿ ಪೆಟೆರಿ ಓರ್ಪೋ ಅವರೊಂದಿಗೆ ಬೀಜಿಂಗ್‍ನಲ್ಲಿ ಸಭೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಂಪಿಂಗ್ ` ವಿಶ್ವಸಂಸ್ಥೆ ಕೇಂದ್ರಸ್ಥಾನದಲ್ಲಿರುವ ಜಾಗತಿಕ ವ್ಯವಸ್ಥೆಯನ್ನು ದೃಢವಾಗಿ ಎತ್ತಿಹಿಡಿಯಲು ಫಿನ್ಲ್ಯಾಂಡ್ ಹಾಗೂ ಇತರ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಕಾರ್ಯ ನಿರ್ವಹಿಸಲು ಸಿದ್ಧವಾಗಿದೆ ಎಂದು ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.

ಕಳೆದ ವಾರ ಟ್ರಂಪ್ ಘೋಷಿಸಿರುವ `ಶಾಂತಿ ಮಂಡಳಿಯ' ಮೂಲಕ ಅಮೆರಿಕಾ ಅಧ್ಯಕ್ಷರು ವಿಶ್ವಸಂಸ್ಥೆಗೆ ಪರ್ಯಾಯ ಜಾಗತಿಕ ವ್ಯವಸ್ಥೆಯನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಕಳವಳದ ನಡುವೆ ಜಿಂಪಿಂಗ್ ಈ ಹೇಳಿಕೆ ನೀಡಿದ್ದಾರೆ. ಶಾಂತಿ ಮಂಡಳಿಗೆ ಸೇರುವಂತೆ ಟ್ರಂಪ್ ನೀಡಿರುವ ಆಹ್ವಾನಕ್ಕೆ ಚೀನಾ ಇದುವರೆಗೆ ಪ್ರತಿಕ್ರಿಯಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News