ಟ್ರಂಪ್, ಪುಟಿನ್, ಕ್ಸಿ ಜಿನ್‍ಪಿಂಗ್ ತ್ರಿಪಕ್ಷೀಯ ಶೃಂಗಸಭೆ ಖಚಿತಪಡಿಸಿದ ಚೀನಾ
ಡೊನಾಲ್ಡ್ ಟ್ರಂಪ್ , ವ್ಲಾದಿಮಿರ್ ಪುಟಿನ್ , ಕ್ಸಿ ಜಿನ್ ಪಿಂಗ್ | Photo Credit : X
ಬೀಜಿಂಗ್: ನವೆಂಬರ್ 19ರಂದು ಶೆನ್‍ಜೆನ್‍ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ತ್ರಿಪಕ್ಷೀಯ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ ಎಂದು ಚೀನಾ ಖಚಿತಪಡಿಸಿದೆ.
ಮೂವರು ನಾಯಕರು `ವಿಶ್ವ ಶಾಂತಿಯನ್ನು ಕಾಪಾಡುವ ಮತ್ತು ಪ್ರಮುಖ ದೇಶಗಳ ಸಂಬಂಧಗಳಲ್ಲಿ ಕಾರ್ಯತಂತ್ರದ ಸ್ಥಿರತೆಯನ್ನು ಉತ್ತೇಜಿಸುವ ಕುರಿತು ಆಳವಾದ ಚರ್ಚೆಗಳನ್ನು ನಡೆಸಲಿದ್ದಾರೆ' ಎಂದು ಚೀನಾದ ವಿದೇಶಾಂಗ ಸಚಿವಾಲಯ `ಎಕ್ಸ್' ನಲ್ಲಿ ಪೋಸ್ಟ್ ಮಾಡಿದೆ.