ಶೇಖ್ ಹಸೀನಾ | Photo Credit ; PTI

ಢಾಕ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸಲು ಭಾರತ ಕೆಲವು ಷರತ್ತುಗಳನ್ನು ವಿಧಿಸಿದೆ ಎಂಬ ವರದಿಯನ್ನು ಬಾಂಗ್ಲಾದೇಶ ಸೋಮವಾರ ತಿರಸ್ಕರಿಸಿದ್ದು, ಉಭಯ ದೇಶಗಳ ನಡುವೆ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತವು ಹಸೀನಾ ಅವರನ್ನು ಹಸ್ತಾಂತರಿಸುತ್ತದೆ ಎಂದು ಬಾಂಗ್ಲಾ ನಿರೀಕ್ಷಿಸುತ್ತಿದೆ ಮತ್ತು ಅವರನ್ನು ವಾಪಸ್ ಕಳುಹಿಸುವಂತೆ ಭಾರತಕ್ಕೆ ಪದೇ ಪದೇ ಪತ್ರ ಬರೆಯಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಮಾ ಒಬೈದ್ ಇಸ್ಲಾಂ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor