ಡ್ರೋನ್ ದಾಳಿ| ರಶ್ಯದ ಕ್ರಿಮಿಯಾ ಸೇತುವೆಗೆ ಹಾನಿ
Photo Credit : AP
ಮಾಸ್ಕೊ: ರವಿವಾರ ತಡರಾತ್ರಿ ರಶ್ಯದ ಮೇಲೆ ಉಕ್ರೇನ್ ಡ್ರೋನ್‍ಗಳ ಮಳೆಗರೆದಿದ್ದು ರಶ್ಯ ಸ್ವಾಧೀನಪಡಿಸಿಕೊಂಡಿರುವ ಕ್ರಿಮಿಯಾ ಪರ್ಯಾಯ ದ್ವೀಪವನ್ನು ರಷ್ಯಾದೊಂದಿಗೆ ಸಂಪರ್ಕಿಸುವ ಸೇತುವೆಗೂ ಹಾನಿಯಾಗಿದೆ.
ಈ ದಾಳಿಯಲ್ಲಿ ಉಕ್ರೇನ್ 1,336 ಡ್ರೋನ್‍ಗಳನ್ನು ಉಡಾಯಿಸಿದೆ. ಮಾಸ್ಕೋದತ್ತ ಧಾವಿಸುತ್ತಿದ್ದ ಸುಮಾರು 600 ಡ್ರೋನ್‍ಗಳನ್ನು ತಡೆಹಿಡಿಯಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.
ತನ್ನ ನಗರಗಳು ಮತ್ತು ಇಂಧನ ಜಾಲಗಳ ಮೇಲೆ ರಶ್ಯ ನಡೆಸುತ್ತಿರುವ ದಾಳಿಗಳಿಗೆ ಪ್ರತಿಯಾಗಿ ನಡೆಸುತ್ತಿರುವ ಈ ಪ್ರತೀಕಾರದ ದಾಳಿಗಳು ನ್ಯಾಯಸಮ್ಮತವಾಗಿವೆ ಎಂದು ಉಕ್ರೇನ್ ಹೇಳಿದೆ.