ಸಾಂದರ್ಭಿಕ ಚಿತ್ರ Photo Credit : AP

ಹೊಸದಿಲ್ಲಿ: ಸೌದಿ ಅರೇಬಿಯದ ತೈಲ ಪೂರೈಕೆಗೆ ಎದುರಾಗಿರುವ ಅಪಾಯದ ಆತಂಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮತ್ತೆ ಬೆಲೆ ಏರಿಕೆಗೆ ಕಾರಣವಾಗಿದೆ. ಯೆಮನ್‌ ನ ಹೌತಿಗಳು ಸೌದಿ ಅರೇಬಿಯದ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಸೌದಿ ಅರಾಮ್ಕೊದ ಆಡಳಿತ ಕಟ್ಟಡದ ಮೇಲೆ ದಾಳಿ ನಡೆಸಿರುವ ಬೆನ್ನಲ್ಲೇ, ಬುಧವಾರ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ 89 ಸೆಂಟ್‌ ಗಳಷ್ಟು (ಶೇ 0.8) ಏರಿಕೆಯಾಗಿ, ಪ್ರತಿ ಬ್ಯಾರೆಲ್‌ ಗೆ 106.58 ಡಾಲರ್‌ಗೆ ತಲುಪಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ (ಡಬ್ಲ್ಯುಟಿಐ) ಕಚ್ಚಾ ತೈಲದ ಬೆಲೆಯೂ 80 ಸೆಂಟ್‌ ಗಳಷ್ಟು (ಶೇ 0.9) ಹೆಚ್ಚಳವಾಗಿ, ಪ್ರತಿ ಬ್ಯಾರೆಲ್‌ ಗೆ 94.94 ಡಾಲರ್‌ ಗೆ ತಲುಪಿದೆ.

ಮಂಗಳವಾರದ ವಹಿವಾಟಿನಲ್ಲಿ ಬ್ರೆಂಟ್ ದರ ಶೇ 0.9ರಷ್ಟು ಕುಸಿದಿದ್ದರೆ, ಡಬ್ಲ್ಯುಟಿಐ ದರ ಶೇ 0.4ರಷ್ಟು ಏರಿಕೆಯಾಗಿತ್ತು. ಇದೀಗ ಸೌದಿ ಅರೇಬಿಯ ಮತ್ತು ಹೌತಿಗಳ ನಡುವಿನ ಸಂಘರ್ಷದಿಂದ ತೈಲ ಪೂರೈಕೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆಯನ್ನು ಉದ್ಯಮ ವಲಯ ಗಂಭೀರವಾಗಿ ಪರಿಗಣಿಸಿದೆ. ಮತ್ತೊಂದೆಡೆ, ರಷ್ಯಾದಿಂದ ಡೀಸೆಲ್ ಪೂರೈಕೆ ಹೆಚ್ಚಾಗುವ ನಿರೀಕ್ಷೆಯೂ ಮಾರುಕಟ್ಟೆಯ ಲೆಕ್ಕಾಚಾರದ ಮೇಲೆ ಪ್ರಭಾವ ಬೀರಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಬ್ರೆಂಟ್ ಕಚ್ಚಾ ತೈಲದ ಫ್ಯೂಚರ್ಸ್ ದರ ಪ್ರತಿ ಬ್ಯಾರೆಲ್‌ ಗೆ 105.69 ಡಾಲರ್‌ಗೆ ಮುಕ್ತಾಯಗೊಂಡಿತ್ತು. ಡಬ್ಲ್ಯುಟಿಐ ದರ 94.14 ಡಾಲರ್‌ನಲ್ಲಿ ಸ್ಥಿರವಾಗಿತ್ತು.

ಸೌದಿ ಅರೇಬಿಯದ ತೈಲ ಘಟಕದ ಮೇಲೆ ನಡೆದ ದಾಳಿಯಿಂದ ತೈಲ ಪೂರೈಕೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ, ರಷ್ಯಾದಿಂದ ಡೀಸೆಲ್ ಪೂರೈಕೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ಎರಡೂ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತ ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor