Photo Credit : AP 

ರಿಯಾದ್: ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ಸಂದರ್ಭ, ಅವನ್ನು ತಡೆಯುವಲ್ಲಿ ವಾಯುರಕ್ಷಣಾ ವ್ಯವಸ್ಥೆಗಳು ಯಾಕೆ ವಿಫಲವಾದವು ಎಂಬ ಬಗ್ಗೆ ಸೌದಿ ಆರೇಬಿಯ ತನಿಖೆಯನ್ನು ಆರಂಭಿಸಿದೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಆರಂಭಿಕ ತನಿಖಾ ವರದಿಗಳ ಪ್ರಕಾರ, ಇರಾನ್ ಬೆಂಬಲಿತ ಹೌತಿ ಬಂಡುಕೋರರು ಡ್ರೋನ್‌ಗಳ ಸಮೂಹವನ್ನೇ ಮೊದಲು ಉಡಾಯಿಸಿ, ಅತ್ಯಾಧುನಿಕ ಕ್ರೂಸ್ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಕಿಂಗ್ ಖಾಲಿದ್ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣದ ಮೇಲೆ ಅಪ್ಪಳಿಸುವುದಕ್ಕೆ ಸುಗಮ ಹಾದಿ ಮಾಡಿಕೊಟ್ಟವು ಎಂದು ತಿಳಿದುಬಂದಿದೆ. ಹೌತಿಗಳು ದಿಕ್ಕುಗಳನ್ನು ಬದಲಿಸುವ ಸಾಮರ್ಥ್ಯವಿರುವ ಸಿಡಿತಲೆಗಳೊಂದಿಗೆ ಸಜ್ಜಿತವಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದ್ದು, ಸೌದಿ ಅರೇಬಿಯದ ಹಾಲಿ ರಕ್ಷಣಾ ತಂತ್ರಜ್ಞಾನಕ್ಕೆ ಗಣನೀಯವಾದ ಸವಾಲನ್ನು ಒಡ್ಡಿದೆ. 621 ಮೈಲು ದೂರದವರೆಗೆ ಕ್ರಮಿಸಿ ಬಂದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ತಡೆಯಲು ರಾಡಾರ್ ಹಾಗೂ ವಾಯುರಕ್ಷಣಾ ವ್ಯವಸ್ಥೆಗಳು ಮುಂಚಿತವಾಗಿ ಎಚ್ಚರಿಕೆ ನೀಡಲು ಯಾಕೆ ವಿಫಲವಾದವೆಂಬುದು ತನಿಖೆಯ ಪ್ರಮುಖ ಉದ್ದೇಶವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor