×
Ad

ಕಾಂಗೋದಲ್ಲಿ ಗಣಿ ಕುಸಿತ: 200ಕ್ಕೂ ಅಧಿಕ ಮಂದಿ ಸಾವು

Update: 2026-01-31 21:58 IST

Photo Credit : aljazeera.com

ಕಿನ್ಷಾಸ: ಪೂರ್ವ ಕಾಂಗೋ ಗಣರಾಜ್ಯದ ರುಬಯಾ ನಗರದಲ್ಲಿ ಗಣಿ ಕುಸಿದು 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ರುಬಯಾ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಬುಧವಾರ ಗಣಿ ಕುಸಿದಿದೆ. ನಿರಂತರ ಸುರಿಯುತ್ತಿರುವ ಮಳೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದ್ದು ಶನಿವಾರದವರೆಗೆ ಕನಿಷ್ಠ 200 ಮಂದಿಯ ಮೃತದೇಹವನ್ನು ಪತ್ತೆಹಚ್ಚಲಾಗಿದೆ ಎಂದು ಬಂಡುಕೋರರ ನಿಯಂತ್ರಣದಲ್ಲಿರುವ ಉತ್ತರ ಕಿವು ಪ್ರಾಂತದ ಗವರ್ನರ್ ಅವರ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಕೋಲ್ಟನ್ (ಮಂದ ಕಪ್ಪು ಲೋಹದ ಅದಿರು) ಗಣಿಯಲ್ಲಿ ದುರಂತ ಸಂಭವಿಸಿದ್ದು ಮಹಿಳೆಯರು ಮತ್ತು ಮಕ್ಕಳು ಮೃತಪಟ್ಟವರಲ್ಲಿ ಸೇರಿದ್ದಾರೆ. ಇವರಲ್ಲಿ ಕೆಲವರು ಗಣಿ ಸಂಸ್ಥೆಯ ಅಧಿಕೃತ ಸಿಬ್ಬಂದಿಗಳಲ್ಲ. ಸುಮಾರು 20 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ. ಸೆಲ್‍ಫೋನ್, ಲ್ಯಾಪ್‍ಟಾಪ್ ಮುಂತಾದ ಆಧುನಿಕ ತಾಂತ್ರಿಕ ಸಾಧನಗಳ ಉತ್ಪಾದನೆಯಲ್ಲಿ ಕೋಲ್ಟನ್ ನಿರ್ಣಾಯಕ ಖನಿಜವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News