ಹಣ ಬೇಡುತ್ತಾ ಜಗತ್ತು ಸುತ್ತಲು ನಮಗೆ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್
Update: 2026-01-31 22:05 IST
ಷಹಬಾಜ್ ಷರೀಫ್ | Photo Credit : AP \ PTI
ಇಸ್ಲಮಾಬಾದ್: ತಾನು ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಆರ್ಥಿಕ ನೆರವು ಬಯಸಿ ಜಗತ್ತನ್ನು ಸುತ್ತಿರುವುದಾಗಿ ಪಾಕಿಸ್ತಾನದ ಪ್ರಧಾನಿ ಷಹಬಾಜ್ ಷರೀಫ್ ಹೇಳಿದ್ದಾರೆ .
ಶುಕ್ರವಾರ ರಾತ್ರಿ ಇಸ್ಲಮಾಬಾದ್‍ನಲ್ಲಿ ಪ್ರಮುಖ ರಫ್ತುದಾರರ ಜೊತೆ ನಡೆಸಿದ ಸಭೆಯಲ್ಲಿ ಷರೀಫ್ ` ಪಾಕಿಸ್ತಾನದ ಆರ್ಥಿಕ ಸ್ಥಿತಿಯಿಂದಾಗಿ ನಮ್ಮ ಮಿತ್ರರಾಷ್ಟ್ರಗಳೂ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಸಾಲ ಪಡೆಯಲು ಹೋಗುವವರ ತಲೆ ಯಾವತ್ತೂ ಬಾಗಿರುತ್ತದೆ ಎಂಬುದು ನಿಮಗೂ ತಿಳಿದಿದೆ. ಆಸಿಮ್ ಮುನೀರ್ ರೊಂದಿಗೆ ಹಣವನ್ನು ಬೇಡುತ್ತಾ ಜಗತ್ತನ್ನು ಸುತ್ತಲು ನಮಗೆ ನಾಚಿಕೆಯಾಗುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.