ವೆನೆಝುವೆಲಾ ತೈಲವನ್ನು ಭಾರತ ಖರೀದಿಸಬಹುದು: ಅಮೆರಿಕ
Update: 2026-01-31 22:02 IST
ಸಾಂದರ್ಭಿಕ ಚಿತ್ರ | Photo Credit : freepik
ವಾಷಿಂಗ್ಟನ್: ರಶ್ಯದ ತೈಲ ಆದಾಯವನ್ನು ನಿಗ್ರಹಿಸುವ ಪ್ರಯತ್ನದ ಭಾಗವಾಗಿ ವೆನೆಝುವೆಲಾದ ತೈಲವನ್ನು ಖರೀದಿಸಲು ಭಾರತಕ್ಕೆ ಅಮೆರಿಕಾ ಆಹ್ವಾನ ನೀಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಭಾರತ ಸೇರಿದಂತೆ ವೆನೆಝುವೆಲಾದಿಂದ ಕಚ್ಛಾ ತೈಲ ಖರೀದಿಸುವ ದೇಶಗಳ ಮೇಲೆ ಅಮೆರಿಕಾ ಅಧ್ಯಕ್ಷ ಟ್ರಂಪ್ 2025ರ ಮಾರ್ಚ್‍ನಲ್ಲಿ 25% ತೆರಿಗೆ ವಿಧಿಸಿದ್ದರು. ಇದೀಗ ರಶ್ಯದಿಂದ ಭಾರತ ಖರೀದಿಸುವ ಕಚ್ಛಾ ತೈಲದ ಪ್ರಮಾಣವನ್ನು ಕಡಿಮೆಗೊಳಿಸುವ ಕ್ರಮವಾಗಿ ವೆನೆಝುವೆಲಾದ ಕಚ್ಛಾ ತೈಲವನ್ನು ಭಾರತಕ್ಕೆ ಪೂರೈಸುವ ಪ್ರಸ್ತಾಪವನ್ನು ಅಮೆರಿಕಾ ಆಡಳಿತ ಮುಂದಿರಿಸಿದೆ ಎಂದು ವರದಿ ಹೇಳಿದೆ.