ಗಾಝಾದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಇಸ್ರೇಲ್: 6 ಮಕ್ಕಳು ಸೇರಿದಂತೆ ಕನಿಷ್ಠ 31 ಫೆಲೆಸ್ತೀನ್ ನಾಗರಿಕರು ಮೃತ್ಯು; ವರದಿ
Update: 2026-01-31 20:37 IST
Photo Credit : aljazeera.com
ಗಾಝಾ: ಇಸ್ರೇಲ್ ಗಾಝಾ ನಗರ ಮತ್ತು ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಆರು ಮಕ್ಕಳು ಸೇರಿದಂತೆ ಕನಿಷ್ಠ 31 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು Al Jazeera ವರದಿ ಮಾಡಿದೆ.
ಗಾಝಾವನ್ನು ಈಜಿಪ್ಟ್‌ಗೆ ಸಂಪರ್ಕಿಸುವ ರಫಾ ಕ್ರಾಸಿಂಗ್ ಅನ್ನು ಇಸ್ರೇಲ್ ರವಿವಾರ ಮತ್ತೆ ತೆರೆಯುವುದಾಗಿ ಹೇಳಿತ್ತು. ಇದಕ್ಕೂ ಒಂದು ದಿನ ಮೊದಲು ಈ ದಾಳಿ ನಡೆದಿದೆ.
ಅಕ್ಟೋಬರ್ 10ರಂದು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ ಗಾಝಾದಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ ಇಸ್ರೇಲ್ ಪಡೆಗಳ ದಾಳಿಗೆ 500ಕ್ಕೂ ಹೆಚ್ಚು ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಗಾಝಾ ಸರಕಾರಿ ಮಾಧ್ಯಮ ತಿಳಿಸಿದೆ.