×
Ad

ಭಾರತ ಮೂಲದ ಈ CEO ವಾರ್ಷಿಕ ವೇತನ ಎಷ್ಟು ಗೊತ್ತೇ?

Update: 2026-06-27 12:20 IST

Photo: x.com/IndianTechGuide

ನ್ಯೂಯಾರ್ಕ್: ಅಮೆರಿಕದ ಆರೋಗ್ಯಸೇವೆ ಮತ್ತು ರಿಯಲ್ ಎಸ್ಟೇಟ್ ದಿಗ್ಗಜ ಸಂಸ್ಥೆ ವೆಲ್‌ಟವರ್ ಕಂಪನಿಯ ಸಿಇಒ ಭಾರತ ಮೂಲದ ಶಂಖ್ ಮಿತ್ರಾ ಅವರು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಬಳಿಕ ಅತಿಹೆಚ್ಚು ವೇತನ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ. 2025ರಲ್ಲಿ ಅವರ ವಾರ್ಷಿಕ ವೇತನ 821 ದಶಲಕ್ಷ ಡಾಲರ್ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಮಸ್ಕ್ ಅವರ ವಾರ್ಷಿಕ ವೇತನ 158 ಶತಕೋಟಿ ಡಾಲರ್ ಆಗಿದೆ.

ಸಿಇಒ ವೇತನ ಇತ್ತೀಚಿನ ದಿನಗಳಲ್ಲಿ ಭಾರಿ ಏರಿಕೆ ಕಂಡಿದ್ದು, 2025ರಲ್ಲಿ ಅತಿಹೆಚ್ಚು ಮಂದಿ ಸಿಇಒಗಳು 100 ದಶಲಕ್ಷ ಡಾಲರ್‌ಗಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಕೆಲ ಮಂದಿ 200 ದಶಲಕ್ಷ ಡಾಲರ್ ಗಡಿ ದಾಟಿದ್ದಾರೆ ಎಂದು ವರದಿ ವಿವರಿಸಿದೆ.

ಕೊಲ್ಕತ್ತಾದ ಜಾಧವಪುರ ವಿಶ್ವವಿದ್ಯಾನಿಲಯದಲ್ಲಿ ಇನ್ಸ್ಟ್ರುಮೆಂಟೇಷನ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಅವರು, ಇಂದು ಅಮೆರಿಕದ ಅಗ್ರಗಣ್ಯ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊಲ್ಕತ್ತಾದಿಂದ ಅಮೆರಿಕಕ್ಕೆ ತೆರಳಿದ ಅವರು ಕೊಲಂಬಿಯಾ ಬ್ಯುಸಿನೆಸ್ ಸ್ಕೂಲ್‌ನಿಂದ ಅಪ್ಲೈಡ್ ವ್ಯಾಲ್ಯೂ ಇನ್ವೆಸ್ಟಿಂಗ್ ವಿಷಯದಲ್ಲಿ ಎಂಬಿಎ ಪದವಿ ಪಡೆದರು. ಇದು ಅವರಿಗೆ ಹಣಕಾಸು ಮತ್ತು ಹೂಡಿಕೆ ನಿರ್ವಹಣೆ ವೃತ್ತಿಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು.

ವೆಲ್ಟವರ್ ಸೇರುವ ಮುನ್ನ ಅವರು ಸಿಟಾಡೆಲ್ ಎಲ್ಎಲ್ಸಿ ಮತ್ತು ಮಿಲೇನಿಯಂ ಮ್ಯಾನೇಜ್ಮೆಂಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು ರಿಯಲ್ ಎಸ್ಟೇಟ್ ಸೆಕ್ಯುರಿಟಿ ಹಾಗೂ ಹೂಡಿಕೆ ಶ್ರೇಣಿಗಳನ್ನು ನಿರ್ವಹಿಸುವಲ್ಲಿ ಗಮನ ಹರಿಸಿದರು. 2016ರಲ್ಲಿ ವೆಲ್ಟವರ್ ಸೇರಿದ ಮಿತ್ರಾ 2018ರಲ್ಲಿ ಮುಖ್ಯ ಹೂಡಿಕೆ ಅಧಿಕಾರಿಯಾಗಿ ಮತ್ತು 2020ರಲ್ಲಿ ಸಿಇಒ ಆಗಿ ಬಡ್ತಿ ಹೊಂದಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News