×
Ad

ವಲಸೆ ಪ್ರತಿಭಟನೆಯ ಬಿಸಿ: ಕ್ಯಾಲಿಫೋರ್ನಿಯಾ ಗವರ್ನರ್ ಬಂಧನಕ್ಕೆ ಟ್ರಂಪ್ ಕರೆ

Update: 2025-06-10 08:37 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)

ಕ್ಯಾಲಿಫೋರ್ನಿಯಾ: ನಗರದಲ್ಲಿ ವಲಸೆಯವರ ಮೇಲೆ ನಡೆದ ದಾಳಿಯ ಬೆನ್ನಲ್ಲೇ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದ್ದು, ಜನಾಕ್ರೋಶದ ಬಿಸಿ ಶ್ವೇತಭವನವನ್ನೂ ತಟ್ಟಿದೆ. ವಲಸೆ ವಿವಾದದ ಹಿನ್ನೆಲೆಯಲ್ಲಿ ಅಧಿಕಾರಿಗಳ ಕ್ರಮಕ್ಕೆ ಅಡ್ಡಿ ಉಂಟುಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ಗನರ್ವರ್ ಗಾವಿನ್ ನ್ಯೂಸಮ್ ಅವರ ಬಂಧನವನ್ನು ತಾವು ಬೆಂಬಲಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.

ಕ್ಯಾಲಿಫೋರ್ನಿಯಾ ಗವರ್ನರ್ ನ್ಯೂಸಮ್ ಹಾಗೂ ಲಾಸ್‍ಎಂಜಲೀಸ್ ಮೇಯರ್ ಕರೆನ್ ಬಾಸ್ ಸೇರಿದಂತೆ ತಮ್ಮ ಕಾರ್ಯದಲ್ಲಿ ಅಡ್ಡಿಯಾಗುವ ಯಾರನ್ನಾರದೂ ಬಂಧಿಸುವುದಾಗಿ ಟ್ರಂಪ್ ಅವರ ಗಡಿ ಝಾರ್ ಟಾಮ್ ಹೊಮನ್ ಶನಿವಾರ ಬೆದರಿಕೆ ಹಾಕಿದ್ದರು.

"ನಾನು ಟಾಮ್ ಆಗಿದ್ದರೆ ಅದನ್ನೇ ಮಾಡುತ್ತಿದ್ದೆ. ಅದು ಒಳ್ಳೆಯ ಕೆಲಸ ಎಂಬ ಭಾವನೆ ನನ್ನದು. ಗಾವಿನ್‍ಗೆ ಪ್ರಚಾರದ ಬಯಕೆ. ಆದರೆ ನಾನು ಇದು ಒಳ್ಳೆಯದು ಎಂದು ಭಾವಿಸುತ್ತೇನೆ" ಎಂದು ಶ್ವೇತಭವನದಲ್ಲಿ ಟ್ರಂಪ್ ಪ್ರತಿಕ್ರಿಯಿಸಿದರು.

ನ್ಯಾಷನಲ್ ಗಾರ್ಡ್ ಪಡೆಯನ್ನು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಿಯೋಜಿಸಿರುವ ಟ್ರಂಪ್ ಆಡಳಿತದ ಕ್ರಮವನ್ನು ನ್ಯೂಸೊಮ್ ಅಕ್ರಮ ಎಂದು ಬಣ್ಣಿಸಿದ್ದು, ಇದರ ವಿರುದ್ಧ ದಾವೆ ಹೂಡಲು ಮುಂದಾಗಿದ್ದಾರೆ.

2028ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ನ್ಯೂಸಮ್ ತಮ್ಮ ಎಕ್ಸ್ ಪೋಸ್ಟ್ ನಲ್ಲಿ, "ಟ್ರಂಪ್‍ಗೆ ನಿಜವಾಗಿ ಬಯಸಿರುವುದು ಇದನ್ನು; ಬೆಂಕಿಯ ಕಿಡಿ ಹಚ್ಚಿದ್ದಾರೆ ಮತ್ತು ನ್ಯಾಷನಲ್ ಗಾರ್ಡ್ ವ್ಯವಸ್ಥೆಯನ್ನು ಅಕ್ರಮವಾಗಿ ಒಕ್ಕೂಟ ವ್ಯವಸ್ಥೆಗೆ ಬಳಸಿಕೊಳ್ಳುವ ಕ್ರಮ ಕೈಗೊಂಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲಿ ಗವರ್ನರ್ ಆಗಿರುವವರನ್ನು ಟ್ರಂಪ್ ಹೇಗೆ ಬಂಧಿಸಲು ಸಾಧ್ಯ ಎಂದು ಅವರು ಸವಾಲು ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News