×
Ad

ಇರಾನ್‌ನಲ್ಲಿ ಮುಂದುವರಿದ ಪ್ರತಿಭಟನೆ: ಬಲವಾದ ಆರ್ಥಿಕ, ಮಿಲಿಟರಿ ಕ್ರಮದ ಎಚ್ಚರಿಕೆ ನೀಡಿದ ಟ್ರಂಪ್

“ಮಡುರೊ ಅವರನ್ನು ಸೆರೆಹಿಡಿದಂತೆ, ಇರಾನ್ ಟ್ರಂಪ್‌ರನ್ನು ಸೆರೆ ಹಿಡಿಯಬೇಕು” ಎಂದ ಇರಾನ್ ಅಧಿಕಾರಿ

Update: 2026-01-10 11:54 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)

ಟೆಹ್ರಾನ್: ಹಣದುಬ್ಬರ, ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಇರಾನ್‌ನಲ್ಲಿ ಪ್ರತಿಭಟನೆ ಮುಂದುವರಿದಿದೆ. ಈ ಮಧ್ಯೆ ಪ್ರತಿಭಟನಾಕಾರರ ಮೇಲೆ ಕ್ರಮಕೈಗೊಂಡರೆ ಅಮೆರಿಕ ಕಠಿಣವಾಗಿ ಪ್ರತಿಕ್ರಿಯಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

“ಈ ಹಿಂದೆ ಮಾಡಿದಂತೆ ಅವರು ಜನರನ್ನು ಹತ್ಯೆ ಮಾಡಿದರೆ ನಾವು ಮಧ್ಯಪ್ರವೇಶಿಸುತ್ತೇವೆ. ಸೈನ್ಯವನ್ನು ಕಳುಹಿಸುವುದು ನನ್ನ ಉದ್ದೇಶವಲ್ಲ. ಬಲವಾದ ಆರ್ಥಿಕ ಅಥವಾ ಮಿಲಿಟರಿ ಕ್ರಮವನ್ನು ಕೈಗೊಳ್ಳುವುದು” ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ ದೂರದರ್ಶನದ ಭಾಷಣದಲ್ಲಿ ಪ್ರತಿಭಟನಾಕಾರರನ್ನು ಟೀಕಿಸಿದರು. “ಇನ್ನೊಂದು ದೇಶದ ಅಧ್ಯಕ್ಷರನ್ನು ಸಂತೋಷಪಡಿಸಲು ಬೀದಿಗಿಳಿದಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಇತರ ಪ್ರಮುಖ ನಗರಗಳ ಬೀದಿಗಳಲ್ಲಿ ಜನರು ಬೀದಿಗಿಳಿದಿದ್ದಾರೆ. ವೀಡಿಯೊಗಳಲ್ಲಿ ಸಾವಿರಾರು ಜನರು ಟೆಹ್ರಾನ್ ಮತ್ತು ಮಶಾದ್‌ನಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿರುವುದು ಕಂಡು ಬಂದಿದೆ. ಮೆರವಣಿಗೆಯಲ್ಲಿ ಅಯತೊಲ್ಲಾ ಅಲಿ ಖಾಮಿನೈ ಅವರ ವಿರುದ್ಧ ಜನರು ಘೋಷಣೆಗಳನ್ನು ಕೂಗುವುದು ಕಂಡು ಬಂದಿದೆ.

ಇರಾನ್‌ನಲ್ಲಿನ ಪ್ರತಿಭಟನೆಗಳ ಕುರಿತು ಅಮೆರಿಕದ ನಿಲುವಿಗೆ ಪ್ರತಿಕ್ರಿಯಿಸಿದ ಇರಾನ್‌ನ ಹಿರಿಯ ಅಧಿಕಾರಿ ಹಸನ್ ರಹಿಂಪೂರ್ ಅಜ್ಘಾದಿ, “ಮಡುರೊ ಅವರನ್ನು ಸೆರೆಹಿಡಿದಂತೆ ಇರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೆರೆ ಹಿಡಿಯಬೇಕು” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News