ಅಮೆರಿಕದ ಸಂಸತ್ತಿನ ದಾಖಲೆಗಳಲ್ಲಿ ಡಾ. ಯು.ಟಿ. ಖಾದರ್ ಅವರ ಸಾಧನೆ ದಾಖಲು
ಮಂಗಳೂರು: ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಸಾಧನೆಗಳನ್ನು ದಾಖಲಿಸಿರುವ ಪ್ರತಿಷ್ಠಿತ "ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್" ದಾಖಲೆಯನ್ನು ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ‍್ಯಾಂಕಿಂಗ್ ಸದಸ್ಯ ಹಾಗೂ ಅಮೆರಿಕದ ಸಂಸತ್ ಸದಸ್ಯ ಜೊನಾಥನ್ ಜಾಕ್ಸನ್ ಅವರು ಗೌರವಪೂರ್ವಕವಾಗಿ ಪ್ರದಾನಿಸಿದರು.
ಪ್ರಸಿದ್ಧ ನಾಗರಿಕ ಹಕ್ಕುಗಳ ಹೋರಾಟಗಾರ ರೆವರೆಂಡ್ ಜೆಸ್ಸಿ ಜಾಕ್ಸನ್ ಅವರ ಪುತ್ರರಾಗಿರುವ ಜೊನಾಥನ್ ಜಾಕ್ಸನ್ ಅವರನ್ನು ಅಮೆರಿಕದ ರಾಜಕೀಯದ ಭವಿಷ್ಯದ ನಾಯಕ ಎಂದು ಹಲವರು ಗುರುತಿಸುತ್ತಾರೆ.
ಡಾ. ಯು. ಟಿ. ಖಾದರ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಸಾಧನೆಗಳನ್ನು ದಾಖಲಿಸಿರುವ ಈ ದಾಖಲೆ ಅಮೆರಿಕದ ಸಂಸತ್ತಿನ ಅಧಿಕೃತ ಆರ್ಕೈವ್ಸ್‌ನಲ್ಲಿ ದಾಖಲಾಗಿದ್ದು, ಅಮೆರಿಕದ ಸಂಸತ್ತಿನ ಗ್ರಂಥಾಲಯದಲ್ಲಿ ಶಾಶ್ವತವಾಗಿ ಸಂರಕ್ಷಿಸಲಾಗುತ್ತದೆ.
ಇದೇ ವೇಳೆ, ಅಮೆರಿಕದ ಕ್ಯಾಪಿಟಲ್ ಹಿಲ್‌ನ ಸೆಂಟ್ರಲ್ ರೋಟುಂಡಾದಲ್ಲಿ ಪ್ರದಾನಗೊಳ್ಳುವ ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ ಅನ್ನು ಜುಲೈ 28ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಡಾ. ಯು. ಟಿ. ಖಾದರ್ ಅವರಿಗೆ ಗೌರವಪೂರ್ವಕವಾಗಿ ಪ್ರದಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಅಮೆರಿಕದ ಸಂಸತ್ ಸದಸ್ಯ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರ ಡಾ. ವಿಜಯ್ ಜಿ. ಪ್ರಭಾಕರ್ ಹಾಗೂ AMEC USA ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನವೀನ್‌ಚಂದ್ರ ಕರ್ಣ ಸಾಕ್ಷಿಯಾದರು.