×
Ad

ಚೆನ್ನೈ - ಕೊಲಂಬೊ ವಿಮಾನದಲ್ಲಿ ಪಹಲ್ಗಾಮ್ ಭಯೋತ್ಪಾದಕರ ಪ್ರಯಾಣದ ಶಂಕೆ; ಶ್ರೀಲಂಕಾದಲ್ಲಿ ತೀವ್ರ ತಪಾಸಣೆ

Update: 2025-05-03 17:46 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ/ಕೊಲಂಬೊ: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರು ಎಂದು ಶಂಕಿಸಲಾದ ಆರು ಮಂದಿ ಚೆನ್ನೈನಿಂದ ಬಂದ ವಿಮಾನದಲ್ಲಿ ಶ್ರೀಲಂಕಾ ತಲುಪಿದ್ದಾರೆ ಎಂಬ ಭಾರತದಿಂದ ಸುಳಿವು ಪಡೆದ ನಂತರ ಶನಿವಾರ ಮಧ್ಯಾಹ್ನ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಶ್ರೀಲಂಕಾ ಏರ್ಲೈನ್ಸ್ ವಿಮಾನ UL122 ಅನ್ನು ಶನಿವಾರ ಬೆಳಿಗ್ಗೆ 11:59 ಕ್ಕೆ ಬಂಡಾರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ತೀವ್ರ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು.

ಪಹಲ್ಗಾಮ್‌ ನ ಆರು ಶಂಕಿತರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಶ್ರೀಲಂಕಾಕ್ಕೆ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಶಂಕಿತರು ಶ್ರೀಲಂಕಾ ಏರ್ಲೈನ್ಸ್ ವಿಮಾನದಲ್ಲಿ ಕೊಲಂಬೊಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ ಎಂದು ಅವರು ಹೇಳಿದರು.

ಶ್ರೀಲಂಕಾ ಪೊಲೀಸರು, ಶ್ರೀಲಂಕಾ ವಾಯುಪಡೆ ಮತ್ತು ವಿಮಾನ ನಿಲ್ದಾಣದ ಭದ್ರತಾ ಘಟಕಗಳು ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಿದವು ಎಂದು ತಿಳಿದು ಬಂದಿದೆ.

ಈ ಕುರಿತು ಚೆನ್ನೈ ಪ್ರದೇಶ ನಿಯಂತ್ರಣ ಕೇಂದ್ರದಿಂದ ಎಚ್ಚರಿಕೆ ಬಂದಿರುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News