×
Ad

ಗಾಝಾ: ಹಮಾಸ್ ದಾಳಿಯಲ್ಲಿ ಇಸ್ರೇಲ್‌ ನ 24 ಯೋಧರ ಸಾವು

Update: 2024-01-23 23:49 IST

Image Source : PTI

ಗಾಝಾ: ದಕ್ಷಿಣ ಗಾಝಾದಲ್ಲಿ ಇಸ್ರೇಲ್ ಪಡೆಯನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ 24 ಯೋಧರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7ರ ಬಳಿಕ ಇಸ್ರೇಲ್ ಪಡೆಯನ್ನು ಗುರಿಯಾಗಿಸಿ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ ಎಂದು ಇಸ್ರೇಲ್ ಸೇನೆ ಮಂಗಳವಾರ ಹೇಳಿದೆ.

ಇಸ್ರೇಲ್ ಯೋಧರಿದ್ದ ಟ್ಯಾಂಕ್ ಹಾಗೂ ಎರಡು ಕಟ್ಟಡಗಳನ್ನು ಗುರಿಯಾಗಿಸಿ ರಾಕೆಟ್ ಚಾಲಿತ ಗ್ರೆನೇಡ್ ಬಳಸಿ ದಾಳಿ ನಡೆಸಲಾಗಿದೆ. ಕಟ್ಟಡಗಳನ್ನು ಸ್ಫೋಟಿಸಲು ಇಸ್ರೇಲ್ ಯೋಧರು ನೆಲಬಾಂಬ್ ಗಳನ್ನು ಇರಿಸುತ್ತಿದ್ದಾಗ ಗ್ರೆನೇಡ್ ಅಪ್ಪಳಿಸಿ ನೆಲಬಾಂಬ್ ಸ್ಫೋಟಗೊಂಡಿದ್ದು ನೆಲಸಮಗೊಂಡ ಕಟ್ಟಡದಡಿ ಸಿಲುಕಿ ಯೋಧರು ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿದೆ.

ಹಮಾಸ್‌ ನ ಕಮಾಂಡರ್ಗಳು ಖಾನ್ ಯೂನಿಸ್ ನಗರದಡಿ ಇರುವ ವಿಶಾಲವಾದ ಸುರಂಗ ಸಂಕೀರ್ಣಗಳಲ್ಲಿ ಅಡಗಿಕೊಂಡಿರಬಹುದು. ಒತ್ತೆಯಾಳುಗಳನ್ನೂ ಇಲ್ಲಿ ಇರಿಸಿಕೊಂಡಿರಬಹುದು. ಮಂಗಳವಾರ ಇಸ್ರೇಲ್ ಸೇನೆ ಖಾನ್ ಯೂನಿಸ್ ನಗರವನ್ನು ಸುತ್ತುವರಿದಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News