Photo Credit : AP 

ಗಾಝಾ, ನ. 26: ಗಾಝಾದಲ್ಲಿ ಬುಧವಾರ ರಾತ್ರಿಯಿಂದ ಇಸ್ರೇಲ್ ನಡೆಸಿದ ವೈಮಾನಿಕ ಮತ್ತು ಗುಂಡಿನ ದಾಳಿಗಳಲ್ಲಿ ಗಾಝಾ ಪಟ್ಟಿಯ (ಹಮಾಸ್ ನೇಮಿಸಿದ) ಉಪ ಶಿಕ್ಷಣ ಸಚಿವರು ಸೇರಿದಂತೆ ಕನಿಷ್ಠ ಒಂಭತ್ತು ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ಗುರುವಾರ ತಿಳಿಸಿದ್ದಾರೆ.

ಗುರುವಾರ ಮಧ್ಯ ಗಾಝಾದ ದೇರ್ ಅಲ್-ಬಲಾಹ್ನಲ್ಲಿರುವ ಅಪಾರ್ಟ್ಮೆಂಟ್ ಒಂದನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಝಾದ ಉಪ ಶಿಕ್ಷಣ ಸಚಿವ ಖಾಲಿದ್ ಅಬು ನಿಡಾ ಮತ್ತು ಅವರ ಪತ್ನಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಬು ನಿಡಾ ಮತ್ತು ಅವರ ಪತ್ನಿಯ ಸಾವನ್ನು ಹಮಾಸ್ ದೃಢಪಡಿಸಿದೆ. ಅಬು ನಿಡಾ ಅವರು ಉಪ ಶಿಕ್ಷಣ ಸಚಿವರಾಗಿದ್ದರು ಮತ್ತು ಸಂಘಟನೆಯ ರಾಜಕೀಯ ಬ್ಯೂರೋದ ಸದಸ್ಯರೂ ಆಗಿದ್ದರು ಎಂದು ತಿಳಿಸಿದೆ.

ಗುರುವಾರ ಪೂರ್ವ ವಲಯದ ಅಲ್-ಬುರೈಜ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಪಡೆಗಳ ಗುಂಡಿನ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಬುಧವಾರ ರಾತ್ರಿ ಗಾಝಾ ನಗರದ ಅಲ್-ತುಫಾಹ್ ನೆರೆಹೊರೆ ಮತ್ತು ಬೀಚ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ಇನ್ನೆರಡು ವೈಮಾನಿಕ ದಾಳಿಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor