ಕೆ.ಎಂ. ಶಖಾವತ್ ಮೂನ್ | Photo Credit : Facebook  

ಢಾಕಾ, ನ. 26: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಮಾಜಿ ಉಪ ಪತ್ರಿಕಾ ಕಾರ್ಯದರ್ಶಿ ಕೆ.ಎಂ. ಶಖಾವತ್ ಮೂನ್ ಮತ್ತು ಇತರ ಇಬ್ಬರನ್ನು ಬುಧವಾರ (ನ. 26) ಬೆಳಿಗ್ಗೆ ಢಾಕಾದ ಧನ್ಮೊಂಡಿ ಪ್ರದೇಶದಿಂದ ವಶಕ್ಕೆ ಪಡೆಯಲಾಗಿದೆ ಎಂದು ಸರಕಾರಿ ಸ್ವಾಮ್ಯದ BSS ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೂನ್ ಅವರೊಂದಿಗೆ ವಶಕ್ಕೆ ಪಡೆಯಲಾದ ಇನ್ನಿಬ್ಬರನ್ನು ಮಾಜಿ ಉಪ ಆಯುಕ್ತ ಮೊಹಮ್ಮದ್ ಇಲಿಯಾಸ್ ಹೊಸೈನ್ ಮತ್ತು ಆದಾಯ ತೆರಿಗೆ ವಕೀಲ ಸೂಫಿ ಮೊಹಮ್ಮದ್ ಅಲ್ ಮಾಮುನ್ ಎಂದು ಗುರುತಿಸಲಾಗಿದೆ ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor