×
Ad

ಗಾಝಾ ನಗರದಲ್ಲಿ ಘರ್ಷಣೆ : ಫೆಲೆಸ್ತೀನ್ ಪತ್ರಕರ್ತನ ಗುಂಡಿಕ್ಕಿ ಹತ್ಯೆ

Update: 2025-10-13 17:13 IST

 ಪತ್ರಕರ್ತ ಸಲೇಹ್ ಅಲ್ಜಫರಾವಿ | Credit : Abdelhakim Abu Riash/Al Jazeera

ಗಾಝಾ : ಕದನ ವಿರಾಮ ಒಪ್ಪಂದದ ಬಳಿಕ ಗಾಝಾ ನಗರದಲ್ಲಿ ನಡೆದ ಘರ್ಷಣೆಯಲ್ಲಿ ಫೆಲೆಸ್ತೀನ್ ಪತ್ರಕರ್ತ ಸಲೇಹ್ ಅಲ್ಜಫರಾವಿ ಮೃತಪಟ್ಟಿದ್ದಾರೆ.

ಸಲೇಹ್ ಅಲ್ಜಫರಾವಿ ಗಾಝಾದಲ್ಲಿನ ಯುದ್ಧದ ಕುರಿತು ವರದಿಗಾಗಿ ಖ್ಯಾತಿ ಪಡೆದಿದ್ದರು. ಅವರು ಸಬ್ರಾ ಪ್ರದೇಶದಲ್ಲಿ ನಡೆದ ಘರ್ಷಣೆಗಳ ಬಗ್ಗೆ ವರದಿ ಮಾಡುತ್ತಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು Aljazeera ವರದಿ ಮಾಡಿದೆ.

ಇಸ್ರೇಲ್ ಬೆಂಬಲಿತ ಗುಂಪು ಹಮಾಸ್ ಜೊತೆ ಘರ್ಷಣೆ ನಡೆಸಿದ್ದು, ಈ ವೇಳೆ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಜನವರಿಯಲ್ಲಿ ಅಲ್ ಜಝೀರಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸಲೇಹ್ ಅಲ್ಜಫರಾವಿ, “ಈ 467 ದಿನಗಳಲ್ಲಿ ನಾನು ನೋಡಿದ ದೃಶ್ಯಗಳು ಮತ್ತು ಘಟನೆಗಳು ನನ್ನ ನೆನಪಿನಿಂದ ಎಂದಿಗೂ ಅಳಿಯುವುದಿಲ್ಲ. ನಾವು ಎದುರಿಸಿದ ಕಷ್ಟಗಳನ್ನು ನಾವು ಎಂದಿಗೂ ಮರೆತುಕೊಳ್ಳಲು ಸಾಧ್ಯವಿಲ್ಲ. ಇಸ್ರೇಲ್ ಹಲವು ಬಾರಿ ಬೆದರಿಕೆ ಹಾಕಿದೆ. ನಿಜವಾಗಿ ಹೇಳಬೇಕಾದರೆ, ನಾನು ಪ್ರತಿಕ್ಷಣವೂ ಭಯದಲ್ಲಿ ಬದುಕುತ್ತಿದ್ದೆ. ಇಸ್ರೇಲ್ ನನ್ನ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿದ ನಂತರ ನನ್ನ ಭಯ ಇನ್ನೂ ಹೆಚ್ಚಾಯಿತು. ಪ್ರತಿಯೊಂದು ಕ್ಷಣವೂ ಏನಾಗುತ್ತದೆ ಎಂಬ ಆತಂಕ ನನ್ನಲ್ಲಿತ್ತು ಎಂದು ಹೇಳಿದ್ದರು.

ಅಕ್ಟೋಬರ್ 2023ರಲ್ಲಿ ಗಾಝಾ ಮೇಲೆ ಇಸ್ರೇಲ್ ಯುದ್ಧ ಪ್ರಾರಂಭವಾದ ಬಳಿಕ 270ಕ್ಕೂ ಅಧಿಕ ಪತ್ರಕರ್ತರ ಹತ್ಯೆ ನಡೆದಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News