×
Ad

ಗಾಝಾ: ಚರ್ಚ್ ಮೇಲೆ ದಾಳಿಯಲ್ಲಿ ಇಬ್ಬರ ಮೃತ್ಯು

Update: 2025-07-17 21:19 IST

PC :  X 

ಗಾಝಾ, ಜು.17: ಗಾಝಾ ಪಟ್ಟಿಯಲ್ಲಿ ಕ್ಯಾಥೊಲಿಕ್ ಚರ್ಚ್‍ನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಗಾಝಾದ ಅಲ್-ಅಹ್ಲಿ ಆಸ್ಪತ್ರೆಯ ವೈದ್ಯರು ಗುರುವಾರ ಹೇಳಿದ್ದಾರೆ.

ಗಾಝಾದ `ಹೋಲಿ ಫ್ಯಾಮಿಲಿ' ಚರ್ಚ್‍ನ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚರ್ಚ್‌ ನ ಧರ್ಮಗುರು ಫಾದರ್ ಗ್ಯಾಬ್ರಿಯೆಲ್ ರೊಮಾನೆಲ್ಲಿ ಅವರ ಕಾಲಿಗೆ ಅಲ್ಪಪ್ರಮಾಣದ ಗಾಯಗಳಾಗಿವೆ ಎಂದು ಇಟಲಿಯ ಅನ್ಸಾ ಸುದ್ದಿಸಂಸ್ಥೆ ವರದಿ ಮಾಡಿದೆ.

`ನಾಗರಿಕ ಸಮುದಾಯದ ವಿರುದ್ಧ ಹಲವು ತಿಂಗಳಿಂದ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಸ್ವೀಕಾರಾರ್ಹವಲ್ಲ. ಯಾವುದೇ ಮಿಲಿಟರಿ ಕ್ರಮಗಳು ಇಂತಹ ಮನೋಭಾವವನ್ನು ಸಮರ್ಥಿಸಲು ಸಾಧ್ಯವಿಲ್ಲ' ಎಂದು ಇಸ್ರೇಲ್ ಪ್ರಧಾನಿ ಜಾರ್ಜಿಯಾ ಮೆಲೋನಿ ಖಂಡಿಸಿದ್ದಾರೆ. ಘಟನೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News