×
Ad

ಜರ್ಮನಿ: ಕಟ್ಟಡದ ಟೆರೇಸ್‌ ಗೆ ಅಪ್ಪಳಿಸಿದ ವಿಮಾನ ; ಇಬ್ಬರು ಮೃತ್ಯು

Update: 2025-05-31 21:55 IST

Photo Credit: AP \ thehindu.com

ಬರ್ಲಿನ್: ಪಶ್ಚಿಮ ಜರ್ಮನಿಯಲ್ಲಿ ಶನಿವಾರ ಲಘು ವಿಮಾನವೊಂದು ವಸತಿ ಕಟ್ಟಡದ ಟೆರೇಸ್‌ ಗೆ ಅಪ್ಪಳಿಸಿದ್ದು ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಕೊರ್ಶೆನ್‍ಬ್ರೋಯಿಚ್ ನಗರದ ಬಳಿ ವಿಮಾನವು ಲ್ಯಾಂಡ್ ಆಗುವ ಕೆಲವೇ ಕ್ಷಣಗಳಿರುವಾಗ ಅಪಘಾತ ಸಂಭವಿಸಿದ್ದು ವಿಮಾನದ ಇಂಜಿನ್‌ ನಲ್ಲಿ ಕಾಣಿಸಿಕೊಂಡ ಸಮಸ್ಯೆ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ. ಕೆಳಗೆ ಬೀಳುತ್ತಿದ್ದ ವಿಮಾನ ವಸತಿ ಕಟ್ಟಡದ ಟೆರೇಸ್‌ ಗೆ ಅಪ್ಪಳಿಸಿದ್ದು ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿದೆ. ಮೃತಪಟ್ಟವರಲ್ಲಿ ಒಬ್ಬ ವಿಮಾನದ ಪೈಲಟ್ ಆಗಿದ್ದು ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News