Photo Credit  : Truth Social/Trump

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮಾಜಿ ಅಧ್ಯಕ್ಷರಿಗೆ ತಮ್ಮದೇ ಆದ ರ‍್ಯಾಂಕಿಂಗ್‌ ನೀಡಿದ್ದಾರೆ. ಈ ಪಟ್ಟಿಯಲ್ಲಿ ತಮ್ಮನ್ನು ಎಲ್ಲರಿಗಿಂತಲೂ ಶ್ರೇಷ್ಠ ಎಂದು ಇರಿಸಿಕೊಂಡಿದ್ದಾರೆ. ಮಾಜಿ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಮತ್ತು ಜಾರ್ಜ್ ವಾಷಿಂಗ್ಟನ್ ಸೇರಿದಂತೆ ಹಲವು ಪ್ರಸಿದ್ಧ ಅಧ್ಯಕ್ಷರನ್ನು ತಮ್ಮ ಕೆಳಗಿನ ‘ಶ್ರೇಷ್ಠ’ ವರ್ಗದಲ್ಲಿ ಇರಿಸಿದ್ದಾರೆ.

ಟ್ರಂಪ್ ಅವರು ‘ಟ್ರುತ್ ಸೋಷಿಯಲ್’ನಲ್ಲಿ ಈ ರ‍್ಯಾಂಕಿಂಗ್‌ ಪ್ರಕಟಿಸಿದ್ದಾರೆ. 80 ವರ್ಷದ ಟ್ರಂಪ್ ಅವರು ತಮ್ಮನ್ನು ಪ್ರತ್ಯೇಕವಾಗಿ ‘ಶ್ರೇಷ್ಠ’ ಎಂದು ಬಣ್ಣಿಸಿಕೊಂಡಿದ್ದಾರೆ.

ಲಿಂಕನ್, ವಾಷಿಂಗ್ಟನ್, ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್, ವುಡ್ರೋ ವಿಲ್ಸನ್, ಥಾಮಸ್ ಜೆಫರ್ಸನ್ ಮತ್ತು ಆಂಡ್ರ್ಯೂ ಜಾಕ್ಸನ್ ಅವರನ್ನು ‘ಶ್ರೇಷ್ಠ’ ವರ್ಗದಲ್ಲಿ ಇರಿಸಿದ್ದಾರೆ. 1945ರಲ್ಲಿ ನಿಧನರಾದ ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ ಅವರು ಈ ಪಟ್ಟಿಯಲ್ಲಿದ್ದಾರೆ.

ಥಿಯೋಡರ್ ರೂಸ್ ವೆಲ್ಟ್ ಸೇರಿದಂತೆ ಹಲವು ಮಾಜಿ ಅಧ್ಯಕ್ಷರಿಗೆ ‘ಶ್ರೇಷ್ಠಕ್ಕೆ ಹತ್ತಿರ’ದ ಸ್ಥಾನ ನೀಡಿದ್ದಾರೆ. ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ‘ಸರಾಸರಿ’ ಎಂದು ಗುರುತಿಸಿದ್ದಾರೆ. ಕ್ಯಾಲ್ವಿನ್ ಕೂಲಿಡ್ಜ್ ಅವರನ್ನು ‘ಸರಾಸರಿಗಿಂತ ಕಡಿಮೆ’ ವರ್ಗದಲ್ಲಿ ಇರಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದಿಂದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಜೋ ಬಿಡನ್ ಮತ್ತು ಜಿಮ್ಮಿ ಕಾರ್ಟರ್ ಅವರನ್ನು ‘ವಿಫಲ’ ವಿಭಾಗದಲ್ಲಿ ಸೇರಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಮಾಜಿ ಅಧ್ಯಕ್ಷರಾದ ಯುಲಿಸಿಸ್ ಎಸ್. ಗ್ರಾಂಟ್ ಮತ್ತು ವಾರೆನ್ ಹಾರ್ಡಿಂಗ್ ಅವರನ್ನೂ ಇದೇ ವಿಭಾಗದಲ್ಲಿ ಇರಿಸಿದ್ದಾರೆ.

ಕಳೆದ ವರ್ಷ ನಡೆದ ಜಿಮ್ಮಿ ಕಾರ್ಟರ್ ಅವರ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಟ್ರಂಪ್ ಭಾಗವಹಿಸಿದ್ದರು.

ಕೆನಡಿ, ರೇಗನ್ ಸೇರಿದಂತೆ ಹಲವರ ಹೆಸರೇ ಇಲ್ಲ

ಟ್ರಂಪ್ ಅವರ ರ್ಯಾಂ ಕಿಂಗ್ ನಲ್ಲಿ ಜಾನ್ ಎಫ್. ಕೆನಡಿ, ರೊನಾಲ್ಡ್ ರೇಗನ್, ರಿಚರ್ಡ್ ನಿಕ್ಸನ್, ಹ್ಯಾರಿ ಎಸ್. ಟ್ರೂಮನ್, ಜೆರಾಲ್ಡ್ ಫೋರ್ಡ್, ಡ್ವೈಟ್ ಡಿ. ಐಸೆನ್ಹೋವರ್ ಮತ್ತು ಲಿಂಡನ್ ಬಿ. ಜಾನ್ಸನ್ ಅವರ ಹೆಸರುಗಳಿಲ್ಲ.

ಜಾರ್ಜ್ ಎಚ್. ಡಬ್ಲ್ಯು. ಬುಷ್, ಜಾರ್ಜ್ ಡಬ್ಲ್ಯು. ಬುಷ್, ವಿಲಿಯಂ ಹೆನ್ರಿ ಹ್ಯಾರಿಸನ್ ಮತ್ತು ಜೇಮ್ಸ್ ಎ. ಗಾರ್ಫೀಲ್ಡ್ ಅವರನ್ನೂ ಪಟ್ಟಿಯಲ್ಲಿ ಸೇರಿಸಿಲ್ಲ.

ಟ್ರಂಪ್ ಅವರು ಈ ಹಿಂದೆ ಜಾನ್ ಎಫ್. ಕೆನಡಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜುಲೈನಲ್ಲಿ ಕೆನಡಿ ಅವರನ್ನು ‘ಮಹಾನ್ ವ್ಯಕ್ತಿ’ ಎಂದು ಕರೆದಿದ್ದ ಟ್ರಂಪ್, ಅಮೆರಿಕದ ಅಧ್ಯಕ್ಷರಲ್ಲಿ ಕೆನಡಿ ಅವರು ಎರಡನೇ ಅತ್ಯಂತ ಆಕರ್ಷಕ ವ್ಯಕ್ತಿ ಎಂದು ಹೇಳಿದ್ದರು.

ಅದೇ ತಿಂಗಳು ಕೆನಡಿ ಮತ್ತು ತಮ್ಮನ್ನು ಒಟ್ಟಿಗೆ ತೋರಿಸುವ AI ಮೂಲಕ ಸೃಷ್ಟಿಸಲಾದ ಚಿತ್ರವೊಂದನ್ನು ಟ್ರಂಪ್ ‘ಟ್ರುತ್ ಸೋಷಿಯಲ್’ನಲ್ಲಿ ಹಂಚಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor