ಪರೋಲ್ ನಲ್ಲಿ ಜೈಲಿನಿಂದ ಹೊರಬಂದ ಡೇರಾ ಮುಖ್ಯಸ್ಥ ಗುರ್ಮಿತ್ ಸಿಂಗ್
Update: 2026-01-05 21:40 IST
ಗುರ್ಮಿತ್ ಸಿಂಗ್ | Photo Credit : PTI
ಚಂಡಿಗಢ : ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ಸಿಂಗ್‌ಗೆ 40 ದಿನಗಳ ಪರೋಲ್ ದೊರೆತ ಬಳಿಕ ಸೋಮವಾರ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಹೊರಗೆ ಬಂದರು.
2017ರಲ್ಲಿ ಶಿಕ್ಷೆಗೊಳಗಾದ ನಂತರ ಗುರ್ಮಿತ್ ಸಿಂಗ್‌ಗೆ ಪರೋಲ್‌ನಲ್ಲಿ ಜೈಲಿನಿಂದ ಹೊರಗೆ ಬರುತ್ತಿರುವುದು ಇದು 15ನೇ ಬಾರಿ.
ಸಿಂಗ್ ಅವರು 40 ದಿನಗಳ ಅವಧಿಯಲ್ಲಿ ತನ್ನ ಸಿರ್ಸಾ ಕೇಂದ್ರ ಕಚೇರಿ ಡೇರಾದಲ್ಲಿ ತಂಗಲಿದ್ದಾರೆ ಎಂದು ಡೇರಾ ವಕ್ತಾರ ಹಾಗೂ ವಕೀಲ ಜಿತೇಂದ್ರ ಖುರಾನಾ ತಿಳಿಸಿದ್ದಾರೆ.
ಅವರು ಕೊನೆಯ ಬಾರಿಗೆ 2025 ಆಗಸ್ಟ್‌ನಲ್ಲಿ 40 ದಿನಗಳ ಪರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರು. ಫೆಬ್ರವರಿ 5ರಂದು ನಡೆದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರಿಗೆ 2025 ಎಪ್ರಿಲ್‌ನಲ್ಲಿ 21 ದಿನಗಳ ಪರೋಲ್ ಹಾಗೂ 2025 ಜನವರಿಯಲ್ಲಿ 30 ದಿನಗಳ ಪರೋಲ್ ನೀಡಲಾಗಿತ್ತು.