×
Ad

ನೇಪಾಳದಲ್ಲಿ ಹೆಲಿಕಾಪ್ಟರ್‌ ಪತನ: 4 ಚೀನೀ ಪ್ರವಾಸಿಗರು ಸೇರಿದಂತೆ 5 ಮಂದಿ ಸಾವು

Update: 2024-08-07 16:54 IST

Screengrab:X/@ians_india

ಕಾಠ್ಮಂಡು: ನೇಪಾಳದ ರಾಜಧಾನಿ ಕಾಠ್ಮಂಡುವಿನ ವಾಯುವ್ಯ ಪ್ರಾಂತ್ಯದಲ್ಲಿರುವ ಪರ್ವತ ಶ್ರೇಣಿಗಳ ಮೇಲೆ ಇಂದು ಹೆಲಿಕಾಪ್ಟರ್‌ ಒಂದು ಪತನಗೊಂಡು ಐದು ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ನಾಲ್ಕು ಮಂದಿ ಚೀನೀ ಪ್ರವಾಸಿಗರಿದ್ದರು.

ನುವಕೊಟ್‌ ಎಂಬಲ್ಲಿನ ಶಿವಪುರಿಯ ವಾರ್ಡ್‌ ಸಂಖ್ಯೆ 7ರಲ್ಲಿ ಹೆಲಿಕಾಪ್ಟರ್‌ ಅವಶೇಷಗಳು ಬಿದ್ದಿದ್ದು ಅಲ್ಲಿ ಐದು ಮೃತದೇಹಗಳು ಪತ್ತೆಯಾಗಿವೆ.

ನೇಪಾಳದ ಏರ್‌ ಡೈನಸ್ಟಿ ಹೆಲಿಕಾಪ್ಟರ್‌ 9ಎನ್‌-ಎಜೆಡಿ ಕಾಠ್ಮಂಡುವಿನಿಂದ ರಸುವಾ ಎಂಬಲ್ಲಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್-ಆಫ್‌ ಮಾಡಿದ ಮೂರು ನಿಮಿಷಗಳಲ್ಲೇ ಈ ಹೆಲಿಕಾಪ್ಟರ್‌ ಟವರ್‌ನೊಂದಿಗೆ ಸಂಪರ್ಕ ಕಳೆದುಕೊಂಡಿತ್ತು.

ಮೃತರಲ್ಲಿ ಓರ್ವ ಮಹಿಳೆ ಮತ್ತು ಪೈಲಟ್‌ ಅರುಣ್‌ ಮಲ್ಲಾ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News