ಸಾಂದರ್ಭಿಕ ಚಿತ್ರ | (AI Image) 

ಢಾಕಾ: ಬಾಂಗ್ಲಾದೇಶದ ಮೈಮನ್‍ಸಿಂಗ್ ಜಿಲ್ಲೆಯಲ್ಲಿ 50 ವರ್ಷದ ಆಭರಣ ವ್ಯಾಪಾರಿಯ ಮೃತದೇಹ ಡ್ರಮ್ ಒಂದರಲ್ಲಿ ಪತ್ತೆಯಾಗಿದೆ. ಅವರನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತರನ್ನು ನಿರಂಜನ್ ಚಂದ್ರ ಸೂತ್ರಧಾರ್ ಎಂದು ಗುರುತಿಸಲಾಗಿದ್ದು, ಇವರು ಜಿಲ್ಲೆಯ ಅಠಾರ್‍ಬಾರಿ ಬಿಲ್ಡಿಂಗ್ ಪ್ರದೇಶದಲ್ಲಿ ಜಂಟಿ ಮಾಲೀಕತ್ವದ ಜ್ಯುವೆಲ್ಲರಿ ಅಂಗಡಿಯನ್ನು ನಡೆಸುತ್ತಿದ್ದರು. ಬೇಗುನ್‍ಬಾರಿ ಪ್ರದೇಶದ ಸ್ಲೂಯಿಸ್ ಗೇಟ್ ಬಳಿ ನೀರಿನಲ್ಲಿ ಡ್ರಮ್ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅವರ ಮೃತದೇಹವನ್ನು ವಶಪಡಿಸಿಕೊಳ್ಳಲಾಯಿತು.

ನಿರಂಜನ್ ಅವರ ಪ್ಯಾಂಟ್ ಜೇಬಿನಲ್ಲಿ ಸಿಕ್ಕ ಟೋಕನ್ ಮೂಲಕ ಪೊಲೀಸರು ಅವರ ಗುರುತನ್ನು ಪತ್ತೆ ಹಚ್ಚಿದ ನಂತರ ಅವರ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಅವರ ಪತ್ನಿ ಮತ್ತು ಮಗ ಗುರುವಾರ ಅವರ ಗುರುತನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor