Photo Credit : AP 

ಬ್ಯಾಂಕಾಕ್: ಥೈಲ್ಯಾಂಡ್‍ನ ರಾಜಧಾನಿ ಬ್ಯಾಂಕಾಕ್‍ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದಾದ್ಯಂತ ವ್ಯಾಪಕ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ, ಶನಿವಾರ ಬ್ಯಾಂಕಾಕ್ ಅನ್ನು ವಿಕೋಪ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಗುಡುಗು ಸಹಿತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

48 ಗಂಟೆಗಳಲ್ಲಿ ಸುಮಾರು 300 ಮಿ.ಮೀ ಮಳೆ ದಾಖಲಾಗಿದ್ದು, ಪ್ರಮುಖ ರಸ್ತೆಗಳು, ವಾಹನಗಳು ನೀರಿನಲ್ಲಿ ಮುಳುಗಿವೆ. ನಿವಾಸಿಗಳು ಸೊಂಟದ ಮಟ್ಟದ ನೀರಿನಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಲುವೆಗಳ ಸಮೀಪದ ಪ್ರದೇಶಗಳು ತೀವ್ರವಾಗಿ ಬಾಧಿತವಾಗಿವೆ. ಸೇನೆಯು ತಾತ್ಕಾಲಿಕ ಆಶ್ರಯ ತಾಣಗಳು ಮತ್ತು ಸಂಚಾರಿ ಅಡುಗೆಮನೆಗಳನ್ನು ಸ್ಥಾಪಿಸುತ್ತಿದೆ. ಬ್ಯಾಂಕಾಕ್ ಮೆಟ್ರೋಪಾಲಿಟನ್ ಆಡಳಿತವು ಶಾಲೆಗಳನ್ನು ತಾತ್ಕಾಲಿಕ ತಂಗುದಾಣಗಳಾಗಿ ಗುರುತಿಸಿದ್ದು, ನಿವಾಸಿಗಳು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor