Photo Credit : X 

ಯಾಂಗಾನ್, ನ.20: ಮ್ಯಾನ್ಮಾರ್ ತನ್ನ ಅಲ್ಪಸಂಖ್ಯಾತ ರೋಹಿಂಗ್ಯಾ ಸಮುದಾಯದ ವಿರುದ್ಧ ನರಮೇಧ ನಡೆಸಿದೆ ಎಂಬ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದ ಐತಿಹಾಸಿಕ ತೀರ್ಪು 'ನ್ಯಾಯಸಮ್ಮತವಾಗಿಲ್ಲ' ಎಂದು ದೇಶದ ಅಧ್ಯಕ್ಷೀಯ ವಕ್ತಾರೆ ಶುಕ್ರವಾರ ಹೇಳಿದ್ದಾರೆ.

ಪಶ್ಚಿಮ ರಾಖೈನ್ ರಾಜ್ಯದಲ್ಲಿ 2017ರಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಮುಸ್ಲಿಂ ರೋಹಿಂಗ್ಯಾಗಳ ವಿರುದ್ಧ ಮ್ಯಾನ್ಮಾರ್ ನಡೆಸಿದ ದೌರ್ಜನ್ಯಗಳ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯ (ICJ) ಗುರುವಾರ ಕಟುವಾದ ಸಾಕ್ಷ್ಯಗಳನ್ನು ಮುಂದಿಟ್ಟಿತ್ತು. ಪತ್ರಿಕಾಗೋಷ್ಠಿಯಲ್ಲಿ ICJ ತೀರ್ಪಿನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಕ್ತಾರೆ ಖೈಂಗ್ ಖೈಂಗ್ ಸೋ, 'ICJ ಪೀಠದ ಎಲ್ಲಾ 15 ನ್ಯಾಯಾಧೀಶರು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿಲ್ಲ. ಆದ್ದರಿಂದ ಇದು ಸರ್ವಾನುಮತದ ನಿರ್ಧಾರವಾಗಿರಲಿಲ್ಲ. ಇದು ನ್ಯಾಯಸಮ್ಮತವಲ್ಲ' ಎಂದು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor