ಇರಾನ್ ಯುದ್ಧ ನಿರ್ಣಯ ಮಸೂದೆ ತಿರಸ್ಕರಿಸಿದ ಅಮೆರಿಕ ಸೆನೆಟ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ನ.19: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿರ್ದೇಶಿಸುವ ಮಸೂದೆಯನ್ನು ಅಮೆರಿಕ ಸೆನೆಟ್ ಗುರುವಾರ ತಿರಸ್ಕರಿಸಿದೆ. ಯುದ್ಧ ಮುಂದುವರಿಸಲು ಸಂಸತ್ತಿನ ಅನುಮೋದನೆ ಪಡೆಯುವಂತೆ ಅಧ್ಯಕ್ಷರಿಗೆ ನಿರ್ದೇಶಿಸುವ ಉದ್ದೇಶವೂ ಈ ನಿರ್ಣಯದಲ್ಲಿತ್ತು.
ಈ ಸಂಘರ್ಷದ ಕುರಿತು ಅಮೆರಿಕನ್ನರಲ್ಲಿದ್ದ ಅಸಮಾಧಾನದಿಂದಾಗಿ ಮಧ್ಯಂತರ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಕೆಲವೇ ವಾರಗಳ ನಂತರ, ರಿಪಬ್ಲಿಕನ್ನರು ಅಧ್ಯಕ್ಷರಿಗೆ ಬೆಂಬಲವಾಗಿ ನಿಂತರು. ಈ ಹಿಂದೆ ಜನಪ್ರತಿನಿಧಿಗಳ ಸಭೆಯಲ್ಲಿ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಅಂಗೀಕಾರಗೊಂಡಿದ್ದ 'ಯುದ್ಧ ಅಧಿಕಾರಗಳ ನಿರ್ಣಯ'ಕ್ಕೆ ಸೆನೆಟ್ನಲ್ಲಿ 51-48 ಮತಗಳ ಅಂತರದಿಂದ ಹಿನ್ನಡೆಯಾಯಿತು. ಮೂವರು ರಿಪಬ್ಲಿಕನ್ ಸದಸ್ಯರು ನಿರ್ಣಯವನ್ನು ಬೆಂಬಲಿಸಿದ್ದರು.
ಸ್ಪಷ್ಟವಾದ ಕಾರ್ಯತಂತ್ರವನ್ನು ರೂಪಿಸಲು ವಿಫಲವಾಗುವ ಮೂಲಕ ಟ್ರಂಪ್ ದೇಶವನ್ನು ಸುದೀರ್ಘ ಸಂಘರ್ಷಕ್ಕೆ ಎಳೆದಿದ್ದಾರೆ ಎಂದು ಡೆಮೋಕ್ರಾಟ್ ಗಳು ವಾದಿಸಿದ್ದಾರೆ.