ಚೀನಾ ಕಂಪೆನಿಗಳಿಗೆ Nvidia ಚಿಪ್ ಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ
Photo Credit : X
ವಾಶಿಂಗ್ಟನ್, ನ.20: ಚೀನಾದ ಸೇನೆಯೊಂದಿಗೆ ಸಂಪರ್ಕ ಹೊಂದಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಶಂಕಿಸಿರುವ ಕಂಪೆನಿಗಳೂ ಸೇರಿದಂತೆ, ಚೀನಾದ ಹಲವಾರು ಸಂಸ್ಥೆಗಳಿಗೆ ಸುಧಾರಿತ ಕೃತಕ ಬುದ್ಧಿಮತ್ತೆ (AI) ಚಿಪ್ ಗಳನ್ನು ರಫ್ತು ಮಾಡಲು Nvidia ಮತ್ತು AMD ಸಲ್ಲಿಸಿದ್ದ ಅರ್ಜಿಗಳಿಗೆ ಅಮೆರಿಕ ಸರಕಾರ ಅನುಮೋದನೆ ನೀಡಿದೆ ಎಂದು ದಾಖಲೆಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ರಿಪಬ್ಲಿಕನ್ ನೇತೃತ್ವದ 'ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿ' ಗುರುವಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, 2025ರ ಡಿಸೆಂಬರ್ ನಿಂದ 2026ರ ಮೇ ತಿಂಗಳವರೆಗಿನ ಆರು ತಿಂಗಳ ಅವಧಿಯಲ್ಲಿ ಅಲಿಬಾಬಾ, ಟೆನ್ಸೆಂಟ್, ಬೈದು ಮತ್ತು ಬಿವೈಡಿ ಸೇರಿದಂತೆ ಚೀನಾದ ಸಮೂಹಗಳಿಗೆ 34.4 ಲಕ್ಷಕ್ಕೂ ಹೆಚ್ಚು ಚಿಪ್ ಗಳನ್ನು ರವಾನಿಸಲು ಅಮೆರಿಕದ ಕಂಪೆನಿಗಳು ಅನುಮತಿ ಕೋರಿದ್ದವು. ಇವುಗಳಲ್ಲಿ 8,79,868 ಚಿಪ್ ಗಳ ರಫ್ತು, ಮರುರಫ್ತು ಅಥವಾ ವರ್ಗಾವಣೆಗೆ 'ಬ್ಯೂರೋ ಆಫ್ ಇಂಡಸ್ಟ್ರಿ ಅಂಡ್ ಸೆಕ್ಯುರಿಟಿ' ಅನುಮೋದನೆ ನೀಡಿದೆ.
ರಫ್ತು ನಿಯಂತ್ರಣಗಳನ್ನು ಮತ್ತಷ್ಟು ಬಿಗಿಗೊಳಿಸಲು ಸಂಸದರು ಒತ್ತಾಯಿಸುತ್ತಿರುವ ನಡುವೆಯೇ ಈ ದಾಖಲೆಗಳು ಬಿಡುಗಡೆಯಾಗಿವೆ.